Job Description: * 85 ವರ್ಷದ ಪದ್ಮಶ್ರೀ ಪುರಸ್ಕೃತ ವೇದಾಂಗ ವಿದ್ವಾನ್ ಆರ್ ಎಲ್ ಕಶ್ಯಪ್ ರವರು ನವೆಂಬರ್ 11 ರಂದು ನಿಧನರಾದರು.* ವೇದ ಮತ್ತು ವೇದಾಂಗ ಪರಿಣಿತರಾಗಿದ್ದ ಅವರು 4 ವೆಅಡಗಳಿಗೆ ಭಾಷ್ಯ ಬರೆದಿದ್ದರು ಮತ್ತು ವೇದಗಳನ್ನು ಅನುವಾದಿಸಿದ್ದರು. * ಮೈಸೂರಿನಲ್ಲಿ ಜನಿಸಿದ ಇವರು ಅಮೆರಿಕಾದ ಪರ್ಡ್ಯೂ ವಿ.ವಿ ಯಲ್ಲಿ 3 ದಶಕಗಳ ಕಾಲ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.* ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ಇವರು ನೀಡಿದ ಕೊಡುಗೆಗೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ. * 250 ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ.* ಕಶ್ಯಪ್ ರವರು ಬರೆದ "ಋಗ್ವೇದವನ್ನು ಏಕೆ ಓದಬೇಕು" ಕೃತಿಯು ಜನಪ್ರಿಯವಾಗಿದೆ. ಇವರಿಗೆ 2003 ರಲ್ಲಿ ಕೇಂದ್ರ ಸರ್ಕಾರವು "ವೇದಾಂಗ ವಿದ್ವಾನ್" ಪ್ರಶಸ್ತಿ ನೀಡಿದೆ.* 2012 ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿವೆ. 2021 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.