Job Description: * ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ 2022 ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ತನ್ನ ಹೋರಾಟ ಕೊನೆಗೊಳಿಸಿದೆ. * ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಅಪಾಯಕಾರಿ ಇಂಗ್ಲೆಂಡ್‌ ಎದುರು 10 ವಿಕೆಟ್‌ಗಳ ಹೀನಾಯ ಸೋಲುಂಡಿತು. ಅಂದಹಾಗೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ವಿಶ್ವ ದಾಖಲೆ ಒಂದನ್ನು ಬರೆದಿದ್ದಾರೆ.* ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಹೀನಾಯವಾಗಿ ಸೋತ ಭಾರತ ತಂಡ ಸ್ಪರ್ಧೆಯಿಂದ ಹೊರಬಿದ್ದಿದೆ.* ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಇದರಿಂದಾಗಿ ಭ್ರಮನಿರಸವಾಗಿದ್ದರೂ, ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಪ್ರದರ್ಶನ ಕೊಂಚ ನಿರಾಳ ತಂದಿದೆ, ಭಾರತದ ಮಾಜಿ ನಾಯಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.* ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡಕ್ಕೆ ಆಸರೆಯಾಗಿ ನಿಂತ ವಿರಾಟ್‌ ಕೊಹ್ಲಿ, 42 ಎಸೆತಗಳಲ್ಲಿ 50 ರನ್‌ ಬಾರಿಸಿದರು. ಇದರಲ್ಲಿ 4 ಫೋರ್‌ ಮತ್ತು 1 ಸಿಕ್ಸರ್‌ ಮೂಡಿಬಂದಿತು. * ಇನಿಂಗ್ಸ್‌ನ 15 ನೇ ಓವರ್‌ನಲ್ಲಿ ಆದಿಲ್‌ ರಶೀದ್‌ ಬೌಲಿಂಗ್‌ನಲ್ಲಿ ಕವರ್ಸ್‌ ಕಡೆಗೆ ಫೋರ್‌ ಬಾರಿಸುವ ಮೂಲಕ ವಿರಾಟ್, ಟಿ20-ಐ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ಗಳ ಗಡಿ ದಾಟಿದರು.* ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡಕ್ಕೆ ಆಸರೆಯಾಗಿ ನಿಂತ ವಿರಾಟ್‌ ಕೊಹ್ಲಿ, 42 ಎಸೆತಗಳಲ್ಲಿ 50 ರನ್‌ ಬಾರಿಸಿದರು, ಇದರಲ್ಲಿ 4 ಫೋರ್‌ ಮತ್ತು 1 ಸಿಕ್ಸರ್‌ ಮೂಡಿಬಂದಿತು. * ಇನಿಂಗ್ಸ್‌ನ 15 ನೇ ಓವರ್‌ನಲ್ಲಿ ಆದಿಲ್‌ ರಶೀದ್‌ ಬೌಲಿಂಗ್‌ನಲ್ಲಿ ಕವರ್ಸ್‌ ಕಡೆಗೆ ಫೋರ್‌ ಬಾರಿಸುವ ಮೂಲಕ ವಿರಾಟ್, ಟಿ20-ಐ ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ಗಳ ಗಡಿ ದಾಟಿದರು.* 2022 ರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 6 ಇನಿಂಗ್ಸ್‌ಗಳಲ್ಲಿ 4 ಅರ್ಧಶತಕ ಬಾರಿಸಿದ ವಿರಾಟ್‌ ಕೊಹ್ಲಿ, ಒಟ್ಟಾರೆ 270 ರನ್‌ಗಳನ್ನು ಬಾರಿಸಿದ್ದಾರೆ. * ಟೂರ್ನಿಯುದ್ದಕ್ಕೂ ಭಾರತ ತಂಡಕ್ಕೆ ಸ್ಪೋಟಕ ಆರಂಭ ಕೊಡಲು ರೋಹಿತ್‌ ಶರ್ಮಾ ಮತ್ತು ಕೆ.ಎಲ್‌ ರಾಹುಲ್‌ ವಿಫಲರಾದರೂ ಆಸರೆಯಾಗಿ ನಿಂತ ವಿರಾಟ್‌ ಕೊಹ್ಲಿ ರನ್‌ ಹೊಳೆ ಹರಿಸಿದ್ದರು. * ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 53 ಎಸೆತಗಳಲ್ಲಿ ಅಜೇಯ 82 ರನ್‌ ಬಾರಿಸಿ ಭಾರತ ತಂಡಕ್ಕೆ ಏಕಾಂಗಿಯಾಗಿ ಜಯ ತಂದುಕೊಟ್ಟಿದ್ದರು.ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರು 1. ವಿರಾಟ್‌ ಕೊಹ್ಲಿ (ಭಾರತ): 4008 ರನ್‌2. ರೋಹಿತ್‌ ಶರ್ಮಾ (ಭಾರತ): 3853 ರನ್3. ಮಾರ್ಟಿನ್‌ ಗಪ್ಟಿಲ್‌ (ನ್ಯೂಜಿಲೆಂಡ್): 3531 ರನ್4. ಬಾಬರ್‌ ಆಝಮ್‌ (ಪಾಕಿಸ್ತಾನ): 3323 ರನ್5. ಪಾಲ್‌ ಸ್ಟಿರ್ಲಿಂಗ್‌ (ಐರ್ಲೆಂಡ್‌): 3181 ರನ್