Job Description: *ನವೆಂಬರ್ 10 ರಂದು ಟಿ20 ವಿಶ್ವಕಪ್ 2022ರ 2ನೇ ಸೆಮಿ ಫೈನಲ್ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿದೆ.* ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 16 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 170 ರನ್ ಗಳಿಸುವ ಮೂಲಕ ಭರ್ಜರಿಯಾಗಿ 10 ವಿಕೆಟ್ಗಳಿಂದ ಜಯ ದಾಖಲಿಸಿತು. * ಟಿ20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ನವೆಂಬರ್ 13 ರಂದು ಸೆಣಸಾಡಲಿದೆ.* ಇಂಗ್ಲೆಂಡ್ ತಂಡವು 16 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 170 ರನ್ ಗಳಿಸುವ ಮೂಲಕ ಭರ್ಜರಿಯಾಗಿ 10 ವಿಕೆಟ್ಗಳಿಂದ ಜಯ ದಾಖಲಿಸಿತು. * ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ 49 ಎಸೆತಗಳಲ್ಲಿ 3 ಸಿಕ್ಸ್ ಮತ್ತು 9 ಪೋರ್ ಮೂಲಕ 80 ರನ್ ಗಳಿಸಿದರೆ, ಅಲೇಕ್ಸ್ ಹೆಲ್ಸ್ 47 ಎಸೆತದಲ್ಲಿ 7 ಸಿಕ್ಸ್ ಮತ್ತು 4 ಬೌಂಡರಿಗಳ ಮೂಲಕ 86 ರನ್ ಗಳಿಸಿ ಮಿಂಚಿದರು. * ಟಿ20 ವಿಶ್ವಕಪ್ 2022 ರ ಫೈನಲ್ ಹಂತಕ್ಕೆ ಇಂಗ್ಲೆಂಡ್ ತಲುಪಿದ್ದು, ಫೈನಲ್ನಲ್ಲಿ ಪಾಕಿಸ್ತಾನ ಎದುರು ಸೆಣಸಾಡಲಿದೆ.* ಭಾರತದ ಬೌಲರ್ಗಳು ಇಂದು ಇಂಗ್ಲೆಂಡ್ ವಿರುದ್ಧ ಯಾವುದೇ ಚಮತ್ಕಾರ್ ಮಾಡುವಲ್ಲಿ ವಿಫಲರಾದರು, ಬಟ್ಲರ್ ಮತ್ತು ಹೇಲ್ಸ್ ಅವರನ್ನು ಕಟ್ಟಿ ಹಅಕುವಲ್ಲಿಯೇ ಸೋತ ಭಾರತದ ಬೌಲರ್ಸ್ ಹೆಚ್ಚಿನ ರನ್ ಬಿಟ್ಟುಕೊಟ್ಟರು.* ಭಾರತದ ಪರ ಭುವನೇಶ್ವರ್ ಕುಮಾರ್ 25 ರನ್, ಅರ್ಷದೀಪ್ ಸಿಂಗ್ 15 ರನ್, ಅಕ್ಷರ್ ಪಟೇಲ್ 30 ರನ್, ಮೊಹಮ್ಮದ್ ಶಮಿ 39 ರನ್, ಅಶ್ವಿನ್ 27 ರನ್ 27 ರನ್ ಮತ್ತು ಹಾರ್ದಿಕ್ ಪಟೇಲ್ 34 ರನ್ ಗಳನ್ನು ಬಿಟ್ಟುಕೊಟ್ಟರು.* ಭಾರತದ ಪರ ಇಂದು ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ 40 ಎಸೆತದಲ್ಲಿ 1 ಸಿಕ್ಸ್ 4 ಪೋರ್ ಮೂಲಕ ಆಕರ್ಷಕ 50 ರನ್ ಗಳಿಸಿದರು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ 4 ನೇ ಅರ್ಧಶತಕ ಸಿಡಿಸಿದರು. ಅಂತಿಮ ಹಂತದಲ್ಲಿ 33 ಎಸೆತದಲ್ಲಿ 5 ಸಿಕ್ಸ್ ಮತ್ತು 4 ಫೋರ್ಗಳ ಮೂಲಕ 63 ರನ್ ಸಿಡಿಸಿದರು. ಉಳಿದಂತೆ ಕೆಎಲ್ ರಾಹುಲ್ 5 ರನ್, ನಾಯಕ ರೋಹಿತ್ ಶರ್ಮಾ 27 ರನ್, ಸೂರ್ಯಕುಮಾರ್ ಯಾದವ್ 14 ರನ್, ರಿಷಭ್ ಪಂತ್ 6 ರನ್ ಗಳಿಸಿ ತಮಡದ ಮೊತ್ತ ಹೆಚ್ಚಿಸಲು ಸಹಾಯಕರಾದರು.* ಪಂದ್ಯ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ 2022 ರ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ನವೆಂಬರ್ 13 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಸಹ ಆ ತಂಡಕ್ಕೆ ಇದು 2 ನೇ ಟಿ20 ವಿಶ್ವಕಪ್ ಆಗಿರಲಿದೆ.