Job Description: * ತಮಿಳುನಾಡಿನಲ್ಲಿ 17 ನೇ ವನ್ಯಜೀವಿ ಅಭಯಾರಣ್ಯವಾಗಿ 68640 ಹೆಕ್ಟೇರ್ ಪ್ರದೇಶದ ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯವನ್ನು ಘೋಷಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರವರು ನವೆಂಬರ್ 8 ರಂದು ಹೇಳಿದ್ದಾರೆ. * ಈ ಅಭಯಾರಣ್ಯವು ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿನ ಮೀಸಲು ಅರಣ್ಯ ಪ್ರದೇಶಗಳನ್ನು ಒಳಗೊಂಡಿದೆ. 35 ಸಸ್ತನಿ ಹಾಗೂ 238 ಪಕ್ಷಿ ಪ್ರಭೇದಗಳನ್ನು ಹೊಂದಿದೆ. ನಾಲ್ಕು ಕೊಂಬಿನ ಹುಲ್ಲೆ, ಆಮೆ, ಜವುಗು ಮೊಸಳೆಗಳು ಕೂಡ ಇಲ್ಲಿವೆ.* ಈ ಪ್ರದೇಶವು ವಿಶಿಷ್ಠ ಪರಿಸರ, ಪ್ರಾಣಿ ಸಂಕುಲ ಹೊಂದಿದೆ ಮತ್ತು ದಕ್ಷಿಣ ಭಾರತದಲ್ಲೇ ಆನೆಗಳ ಪ್ರಮುಖ ಆವಾಸ ಸ್ಥಾನವಾಗಿದೆ.