Job Description: * ವಯೋಸಹಜ ಕಾಯಿಲೆಯಿಂದ ಕನ್ನಡ ಚಿತ್ರರಂಗದ ಹಿರಿಯನಟ 80 ವರ್ಷದ ಲೋಹಿತಾಶ್ವರವರು ನವೆಂಬರ್ 8 ರಂದು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.* ಲೋಹಿತಾಶ್ವರವರು ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು, ಕನ್ನಡದ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. * ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದು, ಸುಮಾರು 33 ವರ್ಷಗಳ ಕಾಲ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. * ನಟಿಸಿದ ನಾಟಕದ ಪಾತ್ರವೊಂದನ್ನು ನೋಡಿ ಶಂಕರ್ ನಾಗ್ ಅವರು 'ಗೀತಾ' ಚಿತ್ರದಲ್ಲಿ ಅವಕಾಶ ನೀಡಿದರು. ಅದು ಲೋಹಿತಾಶ್ವ ಅವರ ಮೊದಲ ಕಮರ್ಷಿಯಲ್‌ ಸಿನಿಮಾವಾಗಿತ್ತು. * ಲೋಹಿತಾಶ್ವ ಅವರು ನಾಟಕ, ದೂರದರ್ಶನದ ಧಾರಾವಾಹಿ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು.