Job Description: * ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು "ಕರ್ನಾಟಕವು ವಿಶ್ವ ಭೂಪಟದಲ್ಲಿ ಮಿನುಗಲಿದೆ" ಎಂದಿದ್ದಾರೆ, ಜಾಗತಿಕ ಬಂಡವಾಳ ಹೂಡಿಕೆಯ ಸಮಾವೇಶದಲ್ಲಿ ಅನುಷ್ಠಾನ, ಉದ್ಯೋಗ ಆಧಾರಿತ, ಮತ್ತು ಉದ್ಯೋಗದಲ್ಲಿ ಸಿಂಹಪಾಲು ಇವುಗಳು ವೈಶಿಷ್ಠ್ಯವಾಗಿವೆ ಹಾಗೂ ಇವುಗಳು ಮುಂದಿನ 5 ವರ್ಷಕ್ಕೆ ರಾಜ್ಯದ ಆರ್ಥಿಕತೆಗೆ ದಿಕ್ಸೂಚಿಯಾಗಲಿವೆ ಎಂದು ಹೇಳಿದ್ದಾರೆ. * 2022 ರ ಜಾಗತಿಕ ಬಂಡವಾಳ ಹೂಡಿಕೆಯ ವಿಭಾಗವಾರು ನಿರೀಕ್ಷೆಗಳು - ಫ್ಯೂಚರ್ ಇಂಡಸ್ಟ್ರೀಸ್ ನಲ್ಲಿ ನವೀಕರಿಸಬಹುದಾದ ಇಂಧನ ಮೂಲ ಬಹಳ ಮುಖ್ಯ, ಈ ವಿಭಾಗದಲ್ಲಿ ಹೂಡಿಕೆಗೆ ವಿಫುಲ ಅವಕಾಶ. - ಏರೋಸ್ಪೇಸ್ ಎನರ್ಜಿ ಸೆಕ್ಟರ್, ಎಲೆಕ್ಟ್ರಿಕಲ್ ವೆಹಿಕಲ್ಸ್, ಆರ್ ಯಾಂಡ್ ಡಿ, ಎಫ್ಎಂಸಿಜಿ ಸೇರಿದಂತೆ ಎಲ್ಲ ರಂಗಗಳಿಂದಲೂ ಹೂಡಿಕೆ ನಿರೀಕ್ಷೆ ಇದೆ. - ಮೇಕ್ ಇನ್ ಇಂಡಿಯಾ ದೃಷ್ಟಿಯಿಂದ ನೋಡಿದರೆ ಎಲೆಕ್ಟ್ರಾನಿಕ್ ಗೂಡ್ಸ್, ಇಂಡಸ್ಟ್ರಿಯಲ್ ಗೂಡ್ಸ್ ಕ್ಷೇತ್ರದಲ್ಲಿ ಭಾರತವು ಅಭಿವೃದ್ಧಿ ಸಾಧಿಸುತ್ತಿದೆ, ಇದರಡಿ ಕೂಡ ನಿರೀಕ್ಷೆ ಇದೆ. * ನವೆಂಬರ್ 2 ರಂದು ಬೆಂಗಾಲಿರಿನ ಅರಮನೆ ಆವರಣದಲ್ಲಿ "ಇನ್ವೆಸ್ಟ್ ಕರ್ನಾಟಕ - 2022" ಸಮಾವೇಶ ನಡೆಯಲಿದ್ದು, ದೇಶ - ವಿದೇಶಗಳಿಂದ ಗಣ್ಯ ಉದ್ಯಮಿಗಳನ್ನು ಒಂದೇ ವೇದಿಕೆಯಡಿ ಸೇರಿಸಲಿರುವ ಜಾಗತಿಕ ಹೂಡಿಕೆ ಇದಾಗಿದೆ. * ಸಮಾವೇಶವು 3 ದಿನಗಳ ಕಾಲ ನಡೆಯಲಿದ್ದು ಹೂಡಿಕೆಗೆ ಸಂಭಂದಿಸಿದಂತೆ ಸುಮಾರು 5 ಲಕ್ಷ ಕೋಟಿ ರೂ ಗಿಂತಲೂ ಹೆಚ್ಚು ಒಪ್ಪಂದಗಳು ಏರ್ಪಡುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಹೇಳಿದ್ದಾರೆ.