Job Description: * ಅಕ್ಟೋಬರ್ 29 ರಂದು ನಡೆದ ಸುಲ್ತಾನ್ ಜೋಹರ್ ಕಪ್ ಟೂರ್ನಿಯಲ್ಲಿ ಭಾರತ ಜೂನಿಯರ್ ಹಾಕಿ ತಂಡದವರು ಚಾಂಪಿಯನ್ ಆದರು.* ಫೈನಲ್‌ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಶೂಟೌಟ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ಭಾರತ ಗೆಲುವು ಸಾಧಿಸಿತು.* ಭಾರತ ಈ ಮೊದಲು 2013, 2014 ರಲ್ಲಿ ಚಾಂಪಿಯನ್‌ ಆಗಿತ್ತು, 2012, 2015, 2018 ಹಾಗೂ 2019 ರಲ್ಲಿ ರನ್ನರ್‌ ಆಪ್‌ ಆಗಿತ್ತು, 2020, 2021 ರಲ್ಲಿ ಕೋವಿಡ್‌ ಕಾರಣದಿಂದ ಟೂರ್ನಿ ನಡೆದಿರಲಿಲ್ಲ.* ಭಾರತ ಕಿರಿಯರ ಹಾಕಿ ತಂಡವು ಮೂರನೇ ಬಾರಿಗೆ ಜೋಹರ್ ಕಪ್ ಟ್ರೋಫಿ ಜಯಿಸಿದ ಬೆನ್ನಲ್ಲೇ ಹಾಕಿ ಇಂಡಿಯಾ, ನಗದು ಬಹುಮಾನ ಘೋಷಿಸಿದೆ, ಚಾಂಪಿಯನ್‌ ಭಾರತ ತಂಡದ ಎಲ್ಲಾ ಆಟಗಾರರಿಗೆ ತಲಾ 2 ಲಕ್ಷ ರೂ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ತಲಾ ಒಂದು ಲಕ್ಷ ರುಪಾಯಿ ಬಹುಮಾನ ಘೋಷಣೆ ಮಾಡಿದೆ.