Job Description: * ಅಕ್ಟೋಬರ್ 31 ರಿಂದ ನವೆಂಬರ್ 6 ರವರೆಗೆ ಒಂದು ವಾರ ಕಾಲ ನಡೆಯುವ ಆಚರಣೆಯ ಭಾಗವಾಗಿ, ಭಾರತ ಸರಕಾರದ ದೂರಸಂಪರ್ಕ ಇಲಾಖೆ ʻಕರ್ನಾಟಕದ ಸಂವಹನ ಖಾತೆಗಳ ನಿಯಂತ್ರಕರ ಕಚೇರಿʼಯು ನಮ್ಮ ದೇಶದ ನಾಗರಿಕರಲ್ಲಿ ಸಮಗ್ರತೆಯ ಪ್ರಜ್ಞೆಯನ್ನು ಬೆಳೆಸುವಂತಹ ವಾತಾವರಣವನ್ನು ನಿರ್ಮಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.* ದೂರಸಂಪರ್ಕ ಇಲಾಖೆ, ಅಂಚೆ ಇಲಾಖೆ, ಭಾರತೀಯ ಸೇನೆ, ಹಲವಾರು ದೂರಸಂಪರ್ಕ ಪಿಎಸ್ಯುಗಳು ಮತ್ತು ದೇಶದ ನಾಗರಿಕರು ಇದರಲ್ಲಿ ಭಾಗವಹಿಸಲಿವೆ, ʻವಾಕಥಾನ್ʼ ಮೂಲಕ ವಿಚಕ್ಷಣಾ ಜಾಗೃತಿ ಸಪ್ತಾಹದ ಆಚರಣೆಗೆ ಚಾಲನೆ ನೀಡಲಾಗುತ್ತಿದೆ.* ಸಮಗ್ರತೆಯ ಪ್ರತಿಜ್ಞೆಯೊಂದಿಗೆ ಪ್ರಾರಂಭವಾಗುವ ʻವಾಕಥಾನ್ʼನಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. * ಈ ಅವಧಿಯಲ್ಲಿ ಆಯೋಜಿಸಿರುವ ವಿವಿಧ ಜಾಗೃತಿ ಕಾರ್ಯಕ್ರಮಗಳಲ್ಲಿ ಮಧ್ಯಸ್ಥಿಕೆದಾರರ ವರ್ಗ ಸಾಮೂಹಿಕವಾಗಿ ಭಾಗವಹಿಸುವಂತೆ ಸಂಘಟಿಸುವುದು ಈ ಕಚೇರಿಯ ಉದ್ದೇಶವಾಗಿದೆ. ಈ ಅವಧಿಯಲ್ಲಿ ಯೋಜಿಸಲಾಗಿರುವ ಕಾರ್ಯಕ್ರಮಗಳಲ್ಲಿ 2 ಗ್ರಾಮ ಸಭೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳೂ ಸೇರಿವೆ.* ಟೆಲಿಕಾಂ ಪರವಾನಗಿದಾರರು ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಈ ಕಚೇರಿಯು ಟೆಲಿಕಾಂ ಜನಸಂಪರ್ಕ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ. * ಭ್ರಷ್ಟಾಚಾರ ಮುಕ್ತ ಭಾರತದಂತಹ ಪ್ರಮುಖ ಸಾಮಾಜಿಕ ಸಮಸ್ಯೆಯ ಬಗ್ಗೆ ಯೋಚಿಸಲು ಮಕ್ಕಳು ಮತ್ತು ಯುವ ವಯಸ್ಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. * ಹಲವಾರು ಸಾರ್ವಜನಿಕ ಶಾಲೆಗಳು, ವಾಯುಪಡೆ ಶಾಲೆಗಳು ಮತ್ತು ಸೇನಾ ಶಾಲೆಗಳು ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಇತರ ಖಾಸಗಿ ಶಾಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. * ʻಸೈಬರ್ ಭದ್ರತೆ ಮತ್ತು ಜಾಗರೂಕತೆʼಯ ಬಗ್ಗೆ ಎಂಜಿನಿಯರಿಂಗ್ ಮತ್ತು ಇತರ ವಿಷಯಗಳ ಪದವಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಾಲೇಜುಗಳಲ್ಲಿ ವೆಬಿನಾರ್ ಅನ್ನು ಸಹ ಯೋಜಿಸಲಾಗಿದೆ. * ಭ್ರಷ್ಟಾಚಾರದ ವಿರುದ್ಧ ಹೋರಾಡಲು ಈ ಬಹುಮುಖಿ ವಿಧಾನವು ಭಾರತ ಸರಕಾರದ ಸಂವಹನ ಮತ್ತು ಐಟಿ ಸಚಿವಾಲಯದ ಅಡಿಯ ದೂರಸಂಪರ್ಕ ಇಲಾಖೆಯ ಪ್ರಯತ್ನವಾಗಿದೆ. * ವಿವಿಧ ಮಧ್ಯಸ್ಥಗಾರರನ್ನು ಒಳಗೊಳ್ಳುವ ಮೂಲಕ ಮತ್ತು ಜಾಗೃತಿಯನ್ನು ಹರಡುವ ಮೂಲಕ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಜಾಗರೂಕತಾ ಕ್ರಮಗಳಿಗೆ ಉತ್ತೇಜನ ಖಾತರಿಪಡಿಸುವ ಪ್ರಯತ್ನವೂ ಇದಾಗಿದೆ.