Job Description: * ಅಕ್ಟೋಬರ್ 25 ರಂದು ರಿಷಿ ಸುನಕ್ ರವರು "ದೇಶದ ಮುಂದೆ ಇರುವ ಸಮಸ್ಯೆಯನ್ನು ಪರಿಹರಿಸುವದಕ್ಕಾಗಿಯೇ ನನ್ನನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ" ಎಂದು ಹೇಳಿದರು. * ಬ್ರಿಟನ್ ದೇಶ ಪ್ರಧಾನಿಯಾಗಿ ರಿಷಿಯವರು ಅಕ್ಟೋಬರ್ 25 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. * ಅಧಿಕಾರ ವಹಿಸಿದ ನಂತರ ರಿಷಿ ಯವರು ಪ್ರಧಾನಿಯ ಅಧಿಕೃತ ನಿವಾಸದ ಬಳಿ ನಿಂತು ಜನರನ್ನುದ್ದೇಶಿಸಿ ಮಾತನಾಡಿದರು "ನಾನು ದೇಶದಲ್ಲಿ ಒಗ್ಗಟ್ಟು ಮೂಡಿಸುತ್ತೇನೆ, ಅದು ಪದಗಳ ಮೂಲಕ ಅಲ್ಲ ಕ್ರಿಯೆಯ ಮೂಲಕ" ಎಂದು ಹೇಳಿದರು.* ಡೊಮಿನಿಕ್ ರಾಬ್ ರವರನ್ನು ಉಪಪ್ರಧಾನಿಯಾಗಿ ರಿಷಿಯವರು ನೇಮಿಸಿದ್ದಾರೆ.* ಟ್ರಸ್ ರವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಜೆರೆಮಿ ಹಂಟ್ ರವರನ್ನು ಉಳಿಸಿಕೊಳ್ಳಲಾಗದೆ, ಟ್ರಸ್ ಸಂಪುಟದಲ್ಲಿದ್ದ ನಾಲ್ವರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ. * ರಿಷಿ ಸುನಕ್ 1980 ರಲ್ಲಿ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದರು, ಸುನಕ್ ಅವರು ವಿಂಚೆಸ್ಟರ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಆರ್ಥಿಕತೆ ವ್ಯಾಸಂಗ ಮುಂದುವರಿಸಿದರು, ನಂತರ ಸ್ಟ್ಯಾನ್‌ಫೋರ್ಡ್‌ನಿಂದ MBA ಪದವಿ ಪಡೆದರು.* ಸುನಕ್ ಅವರು 2015 ರಲ್ಲಿ ರಿಚ್ಮಂಡ್ (ಯಾರ್ಕ್‌ಷೈರ್) ಕ್ಷೇತ್ರದಿಂದ ಚುನಾಯಿತರಾದವರು, ಏಳು ವರ್ಷಗಳ ಅತ್ಯಲ್ಪ ರಾಜಕೀಯ ಜೀವನದಲ್ಲಿಯೇ ಅವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು, ಅವರಿಗಿಂತ ಮೊದಲು, ಒಂಬತ್ತು ವರ್ಷಗಳ ಕಾಲ ಸಂಸದರಾಗಿದ್ದ ಡೇವಿಡ್ ಕ್ಯಾಮರೂನ್ ಅಲ್ಪಾವಧಿಯ ರಾಜಕೀಯದ ಬಳಿಕ ಪ್ರಧಾನಿಯಾಗಿದ್ದರು.* ಡೇವಿಡ್ ಕ್ಯಾಮರೂನ್ ಅವರು 2001 ರಲ್ಲಿ ಸಂಸತ್ತಿಗೆ ಆಯ್ಕೆಯಾಗಿ, 2010 ರಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡರು, ಸುನಕ್ ಅವರು 2018-19 ರಲ್ಲಿ ಸ್ಥಳೀಯ ಸರ್ಕಾರದ ಕಿರಿಯ ಸಚಿವರಾಗಿದ್ದರು, ನಂತರ ಸುನಕ್ ಅವರು 2019-20 ರಲ್ಲಿ ದೇಶದ ಖಜಾನೆಯ ಮುಖ್ಯ ಕಾರ್ಯದರ್ಶಿಯಾದರು.