Job Description: * ರಾಷ್ಟೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿದರು ಸಹ ಕರ್ನಾಟಕದಲ್ಲಿ ಅತಿ ಹೆಚ್ಚು ಕೊಳಚೆ ನೀರು ಸೇರ್ಪಡೆಯಾಗುತ್ತಿದೆ, ಹಾಗಾಗಿ ಕೇಂದ್ರ ಜನ ಸಚಿವಾಲಯವು ಅಸಮಾಧಾನ ವ್ಯಕ್ತಪಡಿಸಿದೆ. * ಭಾರತ ದೇಶದಲ್ಲಿ 351 ಪ್ರಮುಖ ನದಿಗಳಿಗೆ ಕೊಳಚೆ ನೀರು ಸೇರುತ್ತಿದೆ, ಇವುಗಳ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದರ ಬಗ್ಗೆ ಜಲ ಶಕ್ತಿ ಸಚಿವಾಲಯ ಕೇಂದ್ರ ಮೇಲ್ವಿಚಾರಣಾ ಸಮಿತಿಯು ರಾಜ್ಯ ಸರ್ಕಾರಗಳ ಜೊತೆಗೆ ಸಭೆ ನಡೆಸಿತ್ತು.* ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವಾಲಯದ ಕಾರ್ಯದರ್ಶಿ "ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಎನ್ ಜಿಟಿ ಗಡುವು ವಿಧಿಸಿತ್ತು, ಕೆಲವೊಂದು ರಾಜ್ಯಗಳು ಎನ್ ಜಿಟಿ ನಿರ್ಮಾಣ ಮಾಡಿಲ್ಲ. ಅಮೃತ್. ಎನ್ ಆರ್ ಸಿಡಿ ಅನುದಾನದಿಂದ ಈ ಯೋಜನೆಯನ್ನು ಪೂರ್ಣಗೊಳಿಸಬೇಕು" ಎಂದು ನಿರ್ದೇಶನ ನೀಡಿದರು. * 17 ನದಿಗಳಿಗೆ ಕೊಳಚೆ ನೀರು : - - ಕರ್ನಾಟಕದಲ್ಲಿ ನಂದಿಗಳ ತಟದಲ್ಲಿ 38 ನಗರ / ಪಟ್ಟಣಗಳಿವೆ ನಂದಿಗಳ ಮೀಸಲು ಪ್ರದೇಶದಲ್ಲಿ ಕಸ ಎಸೆಯದಂತೆ ಆದೇಶ ನೀಡಲಾಗಿತ್ತು, ಕೆಲವು ನಗರ / ಪಟ್ಟಣಗಳಲ್ಲಿ ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ, 26 ನಗರಗಳು ಮಾತ್ರ ಸರಿಯಾಗಿ ಘನ ತ್ಯಾಜ್ಯ್ತವಸ್ತುಗಳನ್ನು ವಿಲೇವಾರಿ ಮಾಡುತ್ತಿವೆ. - 146 ಚರಂಡಿಗಳು ಮತ್ತು ರಾಜ ಕಾಲುವೆಗಳ ಮೂಲಕ ಕೊಳಚೆ ನೀರು 17 ನದಿಗಳಿಗೆ ಸೇರುತ್ತಿವೆ. - ಕರ್ನಾಟಕದಲ್ಲಿ ಶೇಕಡಾ 69 ರಷ್ಟು ಮಾತ್ರ ತ್ಯಾಜ್ಯವಸ್ತು ಸಂಸ್ಕರಣೆಯಾಗುತ್ತಿದೆ. - ಪ್ರತಿದಿನ 569 ದಶಲಕ್ಷ ಲೀಟರ್ ನಷ್ಟು ಕೊಳಚೆ ನೀರು ಜಲಾಶಯಯಗಳಿಗೆ ಸೇರುತ್ತಿದೆ. * * ಕಾರ್ಯನಿರ್ವಹಿಸದ ಘಟಕಗಳು - ಕರ್ನಾಟಕ ರಾಜ್ಯದ 10 ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. - 2022 ರೊಳಗೆ ಇವುಗಳನ್ನು ದುರಸ್ತಿ ಮಾಡುವದಾಗಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ಭರವಸೆ ನೀಡಿದ್ದರು.* 11,091 ಟನ್ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಕಸ. * 3,603 ಜಲಮಾಲಿನ್ಯ ಉಂಟು ಮಾಡುತ್ತಿರುವ ಕೈಗಾರಿಕೆಗಳು.* 3,423 ಕೈಗಾರಿಕೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. * 168 ಕೈಗಾರಿಕೆಗಳ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. * 6,817 ಟನ್ ನಿತ್ಯ ಸಂಸ್ಕರಣೆ ಆಗುತ್ತಿರುವ ಕಸ * 1,250 ಟನ್ ಭೂಭರ್ತಿ ಘಟಕಗಳಿಗೆ ನಿತ್ಯ ಸೇರುತ್ತಿರುವ ಕಸ.* 3,018 ಟನ್ ಪ್ರತಿದಿನ ಸಂಸ್ಕರಣೆ ಆಗದೆ ಇರುವ ಕಸ.