Job Description: * ನಾಲ್ಕು ವರ್ಷಗಳ ನಂತರ ಆರ್ಥಿಕ ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಬೂದು ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ಯಶಸ್ವಿಯಾಗಿದೆ.* ಉಗ್ರರಿಗೆ ನಿಧಿ ಪೂರೈಕೆ ನಿಲ್ಲಿಸುವುದು ಮತ್ತು ಅಕ್ರಮ ಹಣ ವಹಿವಾಟಿಗೆ ತಡೆ ಹಾಕುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ ಎಂದು ಎಫ್‌ಎಟಿಎಫ್ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ, ಬೂದು ಪಟ್ಟಿಯಿಂದ ಹೊರಬರಲು ಅಥವಾ ಕಪ್ಪುಪಟ್ಟಿ ಸೇರುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನಕ್ಕೆ ಒಟ್ಟು 39 ಮತಗಳ ಪೈಕಿ ಕನಿಷ್ಠ 12 ಮತಗಳು ಬೇಕಾಗಿದ್ದವು.* ಮೂರು ದೇಶಗಳ ಬೆಂಬಲ ಬೇಕಿತ್ತು. ಚೀನಾ, ತುರ್ಕಿ ಮತ್ತು ಮಲೇಷ್ಯಾಗಳು ಪಾಕಿಸ್ತಾನವನ್ನು ಬೂದುಪಟ್ಟಿಯಿಂದ ಹೊರತಂದಿವೆ, ಉಗ್ರರಿಗೆ ನಿಧಿ ದೊರೆಯುತ್ತಿರುವುದನ್ನು ನಿಲ್ಲಿಸದ ಕಾರಣಕ್ಕಾಗಿ 2018 ರಿಂದ ಪಾಕಿಸ್ತಾನವನ್ನು ಎಫ್‌ಎಟಿಎಫ್ ಬೂದುಪಟ್ಟಿಗೆ ಸೇರಿಸಿತ್ತು. * ಎಫ್‌ಎಟಿಎಫ್‌ ಜಾಗತಿಕ ಅಕ್ರಮ ವಹಿವಾಟು ಮತು ಉಗ್ರರಿಗೆ ಹಣಪೂರೈಕೆ ಮೇಲೆ ನಿಗಾ ಇಟ್ಟಿರುವ ಸಂಸ್ಥೆಯಾಗಿದೆ. * ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಿದ್ದರಿಂದ ಆ ದೇಶಕ್ಕೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು ದೊರೆಯುವುದು ನಿಂತು ಹೋಗಿತ್ತು. * ಮೊದಲೇ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಪಾಕ್‌ಗೆ ವಿಶ್ವಬ್ಯಾಂಕ್, ಏಷ್ಯಾ ಡೆವೆಲಪ್‌ಮೆಂಟ್‌ ಬ್ಯಾಂಕ್ ಅಥವಾ ವಿಶ್ವಬ್ಯಾಂಕ್ ನೆರವಿಲ್ದದೆ ಪರದಾಡುವಂತಾಗಿತ್ತು.