Job Description: * ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2022 ರ ಶಾಲಿನ ದೀಪಾವಳಿ ಹಬ್ಬವನ್ನು ಕಾರ್ಗಿಲ್ ನಲ್ಲಿ ಆಚಸರಿಸಿದರು, ಅವರೆಲ್ಲರನ್ನು ಉದ್ದೇಶಿಸಿ ಮಾತನಾಡಿದರು, ಶೌರ್ಯ ಪರಾಕ್ರಮದಿಂದ ಕೂಡಿದ ಕಾರ್ಗಿಲ್ ನ ಈ ಮಣ್ಣಿಗೆ ನಮನ ಸಲ್ಲಿಸುವ ಭಾವನೆಯು ತಮ್ಮನ್ನು ಪದೇ ಪದೇ ಸಶಸ್ತ್ರ ಪಡೆಗಳ ವೀರ ಪುತ್ರರು ಮತ್ತು ಪುತ್ರಿಯರತ್ತ ಸೆಳೆದು ತರುತ್ತದೆ ಎಂದು ಹೇಳಿದರು. "ಹಲವು ವರ್ಷಗಳಿಂದ, ನೀವು ನನ್ನ ಕುಟುಂಬದ ಭಾಗವಾಗಿದ್ದೀರಿ" ಎಂದು ಹೇಳಿದರು * ಯೋಧರೊಂದಿಗೆ ಇದ್ದಾಗ ದೀಪಾವಳಿಯ ಸಿಹಿ ಮತ್ತಷ್ಟು ಹೆಚ್ಚುತ್ತದೆ ಮತ್ತು ಅವರ ನಡುವೆ ಇರುವ ದೀಪಾವಳಿಯ ಪ್ರಕಾಶ ತಮ್ಮೊಂದಿಗೆ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು, ಒಂದು ಕಡೆ ರಾಷ್ಟ್ರದ ಸಾರ್ವಭೌಮ ಗಡಿಗಳಿದ್ದರೆ, ಇನ್ನೊಂದು ಕಡೆ ಬದ್ಧತೆಯ ಸೈನಿಕರಿದ್ದಾರೆ, ಒಂದು ಕಡೆ ನಮಗೆ ತಾಯ್ನಾಡಿನ ಮಣ್ಣಿನ ಬಗ್ಗೆ ಪ್ರೀತಿ ಇದ್ದರೆ, ಮತ್ತೊಂದೆಡೆ, ಧೈರ್ಯಶಾಲಿ ಸೈನಿಕರು ಇದ್ದಾರೆ.*"ಇಂದು, ಕಾರ್ಗಿಲ್ ನ ವಿಜಯ ಭೂಮಿಯಿಂದ, ಭಾರತ ಮತ್ತು ವಿಶ್ವದ ಪ್ರತಿಯೊಬ್ಬರಿಗೂ ತಾವು ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು. * 7-8 ವರ್ಷಗಳ ಹಿಂದೆ 10 ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದ ಭಾರತ ವಿಶ್ವದ 5 ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿರುವ ಇತ್ತೀಚಿನ ಸಾಧನೆಯನ್ನು ಅವರು ಎತ್ತಿ ತೋರಿಸಿದರು. 80,000 ಕ್ಕೂ ಹೆಚ್ಚು ನವೋದ್ಯಮಗಳ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು.