Job Description: * ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಯವರ ಅಳಿಯರಾದ ರಿಷಿ ಸುನಕ್ ರವರು ಅಕ್ಟೋಬರ್ 24 ರಂದು ಬ್ರಿಟನ್ ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಪಡೆಯುವಲ್ಲಿ ಯಶಸ್ವಿಯಾದರು, ಹಾಗಾಗಿ ಬ್ರಿಟನ್ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. * ಬೋರಿಸ್ ಜಾನ್ಸನ್ ರವರು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನಾಯಕತ್ವಕ್ಕೆ ನಡೆದ ಸ್ಪರ್ಧೆಯಲ್ಲಿ ರಿಷಿ ಸುನಕ್ ರವರು ಲಿಸ್ ಟ್ರಸ್ ರವರ ಎದುರು ಸೋತಿದ್ದರು. ಆದರೆ ಟ್ರಸ್ ಅವರು ಆರ್ತಿಕ ಬಿಕ್ಕಟ್ಟನ್ನು ಎದುರಿಸದೆ ಇರುವ ಕಾರಣ ತಮ್ಮ ಪ್ರಧಾನಿ ಹುದ್ದೆಗೇರಿದ 44 ದಿನಗಳಲ್ಲಿಯೇ,ರಾಜೀನಾಮೆ ನೀಡಿದರು. * ಟ್ರಸ್ ರವರ ರಾಜೀನಾಮೆ ಬಳಿಕ ನಾಯ್ಕತ್ವ ಸ್ಥಾನಕ್ಕೆ ಸ್ಪರ್ಧಿಸುವದಾಗಿ ರಿಷಿ ಅವರಿಗೆ 200 ಸಂಸದರ ಬೆಂಬಲ ಸಿಕ್ಕಿತು, ಹಾಹಾಗಿ ಭಾರತ ಮೂಲದ ರಿಷಿ ಸುನಕ್ ರವರು ಬ್ರಿಟನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. * ಬ್ರಿಟನ್ ನ ಸುಮಾರು 2 ಶತಮಾನಗಳ ಇತಿಹಾಸದಲ್ಲಿ, 42 ಹರೆಯದ ರಿಷಿ ಸುನಕ್ ರವರು ಅತ್ಯoತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.