Job Description: * ಚೀನಾ ಅಧ್ಯಕ್ಷ ಷಿಜಿನ್ ಪಿಂಗ್ ರವರು ಸತತ 3 ನೇ ಬಾರಿಗೆ ಚೀನಾ ಕಮ್ಯುನಿಸ್ಟ್ ಪಾರ್ಟಿಯ(ಸಿಪಿಸಿ) ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. * ಸಿಪಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಕಾರಣದಿಂದ ಜಿನ್ ಪಿಂಗ್ ರವರು ದೇಶದ ಅಧ್ಯಕ್ಷರಾಗಿ ಹಾಗು ಸೇನೆಯ ಮುಖ್ಯಸ್ಥರಾಗಿಯೂ ಮುಂದುವರೆಯಲಿದ್ದಾರೆ. * ಸಿಪಿಸಿ ಸಂಸ್ಥಾಪಕ ಮಾ ವೊ ಜಿಡಾಂಗ್ ನಂತರ ಜಿನ್ ಪಿಂಗ್ ರವರೇ ಸತತ ಮೂರನೇ ಬಾರಿ ಅಧ್ಯಕ್ಷರಾಗಿದ್ದಾರೆ, ಈ ಹುದ್ದೆಗೆ ಸತತ ಮೂರನೇ ಸಲ ಆಯ್ಕೆಗೊಂಡ ಪಕ್ಷದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. * ಜಿನ್ ಪಿಂಗ್ ರವರ ಹೆಸರನ್ನು ಅಧಿಕೃತವಾಗಿ ಅಕ್ಟೋಬರ್ 23 ರಂದು ಘೋಷಿಸಲಾಯಿತು, ಸಮಾವೇಶದಲ್ಲಿ 300 ಕ್ಕೂ ಸದಸ್ಯರು ಇರುವ ಕೇಂದ್ರ ಸಮಿತಿಯನ್ನು ಸಮಾರೋಪಕ್ಕೆ ಆಯ್ಕೆ ಮಾಡಲಾಯಿತು, ಇವರ ಅಧಿಕಾರಾವಧಿ 5 ವರ್ಷ.