Job Description: * ಅಕ್ಟೋಬರ್ 22 ರಂದು ಬಳ್ಳಾರಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕನ್ನಡ ಜಿಲ್ಲೆಯ ರೇಣುಕಾ ರಮಾನಂದ್ ರವರ "ಸಂಬಾರ ಬಟ್ಟಲು ಕೊಡಿಸು" ಎಂಬ ಕೃತಿಯು ಆಯ್ಕೆಯಾಗಿದೆ, ಸಮೇಳನದಲ್ಲಿ ರೇಣುಕಾ ರಮಾನಂದ್ ರವರಿಗೆ ಪುರಸ್ಕಾರ ಪ್ರಧಾನ ಮಾಡಲಾಯಿತು. * ಒಟ್ಟು 140 ಕೃತಿಗಳು ಈ ಸ್ಪರ್ಧೆಗೆ ಬಂದಿದ್ದವು, ಅವುಗಳಲ್ಲಿ ಮೊದಲನೇ ಹಂತದಲ್ಲಿ 17 ಕೃತಿಗಳು ನಂತರ 12 ಕೃತಿಗಳನ್ನು ಅಂತಿಮ ಸುತ್ತಿನಲ್ಲಿ ನಿರ್ಣಾಯಕರಿಗೆ ಕಳುಹಿಸಲಾಯಿತು, ರಾಜೇಂದ್ರ ಚಿನ್ನಿ ಮತ್ತು ವಿನಯಾ ಒಕ್ಕುಂದ ರವರು ಇರುವ ತಂಡದಿಂದ ಈ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಓ.ಎಲ್. ನಾಗಭೂಷಣ್ ರವರು ತಿಳಿಸಿದರು. * ವಿಶ್ವ ಕವಿ ಸಮ್ಮೇಳನದ ಎರಡನೇ ದಿನ "ಸಂಗಂ" ಪುಸ್ತಕವನ್ನು ಬಿಡುಗಡೆ ಮಾಡಲಾಯಿತು, ರಾಜೇಂದ್ರ ಪ್ರಸಾದ್ ರವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.