Job Description: * ರಾಯಪುರದಲ್ಲಿ ನವೆಂಬರ್ 1 ರಿಂದ 3 ರವರೆಗೆ ರಾಷ್ಟೀಯ ಬುಡಕಟ್ಟು ನೃತ್ಯೋತ್ಸವ ನಡೆಯಲಿದೆ, 1,500 ರಷ್ಟು ಜನ ಸ್ಥಳೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸುತ್ತಿದ್ದಾರೆ ಎಂದು ಛತ್ತೀಸಘಡ್ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಿಳಿಸಿದ್ದಾರೆ. * ರಾಯಪುರದ ವಿಜ್ಞಾನ ಕಾಲೇಜಿನಲ್ಲಿ ಈ ಸಮಾರಂಭವನ್ನು ಹಮ್ಮಿಕೊಳ್ಳಲ್ಲಿದ್ದು ಮತ್ತು ಇದನ್ನು ಪ್ರವಾಸೋದ್ಯಮ ಮಂಡಳಿಯು ಆಯೋಜಿಸಿದೆ ಎಂದು ಬಘೇಲ್ ರವರು ಹೇಳಿದರು. * ಜಗತ್ತಿನಾದ್ಯಂತ ಇರುವ ಬುಡಕಟ್ಟು ಜನಾಂಗದವರಿಗೆ ಪ್ರೋತ್ಸಾಹ ನೀಡುವದು ಈ ನೃತ್ಯೋತ್ಸವದ ಗುರಿಯಾಗಿದೆ. * ಮಂಗೋಲಿಯಾ, ರಷ್ಯಾ, ಇಂಡೋನೇಷ್ಯಾ, ಸೈಬೀರಿಯಾ, ನ್ಯೂಜಿಲೆಂಡ್, ಈಜಿಪ್ಟ್ ಇನ್ನು ಮುಂತಾದ ದೇಶಗಳ ನೃತ್ಯಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.