Job Description: * 2022 ರ ಅಕ್ಟೋಬರ್ 20 ರಂದು ಬಿಡುಗಡೆಯಾದ ಇ.ಪಿ.ಎಫ್.ಒ ನ ತಾತ್ಕಾಲಿಕ ವೇತನಪಟ್ಟಿ ದತ್ತಾಂಶದಲ್ಲಿ 2022 ರ ಅಗಸ್ಟ್ ನಲ್ಲಿ ಇ.ಪಿ.ಎಫ್.ಒ ಗೆ ಒಟ್ಟು 16.94 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ.* ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ವೇತನಪಟ್ಟಿ ದತ್ತಾಂಶದಲ್ಲಿ ಏರಿಕೆ ಕಂಡು ಬಂದಿದ್ದು, 2022 ರ ಆಗಸ್ಟ್ ನಲ್ಲಿ ಸದಸ್ಯತ್ವ ಸೇರ್ಪಡೆಯಲ್ಲಿ ಒಟ್ಟು ಶೇ 14.40 ರಷ್ಟು ಹೆಚ್ಚಳವಾಗಿದೆ.* ತಿಂಗಳಲ್ಲಿ ಒಟ್ಟು 16.94 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದು, ಇಪಿಎಫ್ಒಗೆ ಮೊದಲ ಬಾರಿಗೆ 9.87 ಲಕ್ಷ ಹೊಸ ಸದಸ್ಯರು ಸೇರಿಕೊಂಡಿದ್ದಾರೆ. 9.87 ಲಕ್ಷ ಹೊಸ ಸದಸ್ಯರ ಪೈಕಿ 58.32% ರಷ್ಟು 18-25 ವಯೋಮಿತಿಯವರು. * 2022 ರ ಅಗಸ್ಟ್ ನಲ್ಲಿ ಲಿಂಗ ಆಧಾರಿತವಾದ ವೇತನ ಪಟ್ಟಿ ದತ್ತಾಂಶದ ವಿಶ್ಲೇಷಣೆ ಪ್ರಕಾರ ಒಟ್ಟು ಮಹಿಳಾ ಸದಸ್ಯರ ನೋಂದಣಿ ಸಂಖ್ಯೆ 3.63 ಲಕ್ಷದಷ್ಟಿದೆ, ವರ್ಷದಿಂದ ವರ್ಷಕ್ಕೆ ಮಹಿಳೆಯರು ಸಂಘಟಿತ ಕಾರ್ಯವಲಯದಲ್ಲಿ ಸದಸ್ಯರಾಗುತ್ತಿದ್ದು, 2021 ರ ಅಗಸ್ಟ್ ಗೆ ಹೋಲಿಕೆ ಮಾಡಿದರೆ 2022 ರ ಅಗಸ್ಟ್ ನಲ್ಲಿ ಈ ಪ್ರಮಾಣ 22.60% ರಷ್ಟು ಏರಿಕೆಯಾಗಿದೆ.* ವೇತನಪಟ್ಟಿಯಲ್ಲಿ ಈ ತಿಂಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ, ಗುಜರಾತ್ ಮತ್ತು ದೆಹಲಿ ರಾಜ್ಯಗಳಲ್ಲಿ ಸುಮಾರು 11.25 ಲಕ್ಷದಷ್ಟು ಸೇರ್ಪಡೆಯಾಗಿದ್ದು, ನಿವ್ವಳ ಪ್ರಮಾಣ 66.44% ರಷ್ಟು ಏರಿಕೆಯಾಗಿದೆ.* ರಫ್ತು ಸೇವೆಗಳು [ಮಾನವ ಶಕ್ತಿಯನ್ನು ಒಳಗೊಂಡಂತೆ, ಖಾಸಗಿ ಭದ್ರತಾ ಸಂಸ್ಥೆಗಳು ಮತ್ತು ಸಣ್ಣ ಗುತ್ತಿಗೆದಾರರು ಮತ್ತಿತರರು] ಮತ್ತು “ವ್ಯಾಪಾರ ವಾಣಿಜ್ಯ ಸಂಸ್ಥೆಗಳು” ಇಲ್ಲಿ 47.03% ರಷ್ಟು ಒಟ್ಟು ಸದಸ್ಯರ ಸಂಖ್ಯೆ ಸೇರ್ಪಡೆಯಾಗಿದೆ.* ಇ.ಪಿ.ಎಫ್.ಒ ವೇತನ ಪಟ್ಟಿ ಸಂಘಟಿತ ವಲಯದ ಸಂಸ್ಥೆಗಳ ಕಾರ್ಯಶಕ್ತಿಯ ಭಾಗವಾಗಿದ್ದು, ಇವು ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952ರ ಅಡಿಯಲ್ಲಿ ಬರುವ ಸಂಸ್ಥೆಗಳಿಗೆ ಅನ್ವಯವಾಗುತ್ತವೆ. ಇದರಡಿ ಬರುವ ಸದಸ್ಯರಿಗೆ ನಿವೃತ್ತಿ ನಂತರ ಭವಿಷ್ಯ ನಿಧಿ, ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಸದಸ್ಯರು ಮೃತಪಟ್ಟ ನಂತರ ಕುಟುಂಬ ಪಿಂಚಣಿ ಮತ್ತು ವಿಮಾ ಸೌಲಭ್ಯಗಳನ್ನು ಒದಗಿಸುತ್ತದೆ.