Job Description: * ಹುನೂರ್ ಇಂಡಿಯಾ ಸಂಸ್ಥೆಯು ದೇಶದ ಮಹಾದಾನಿಗಳ ಪಟ್ಟಿ ಬಿಡುಗಡೆ ಮಾಡಿದೆ, ಎಚ್ ಸಿಎಲ್ ಕಂಪನಿಯ ಗೌರವಾಧ್ಯಕ್ಷ ಶಿವ ನಾಡಾರ್ ರವರು ಮೊದಲ ಸ್ಥಾನದಲ್ಲಿದ್ದರೆ, 2021-2022 ಒಟ್ಟು 1,161 ಕೋಟಿಯನ್ನು ದಾನವಾಗಿ ನೀಡಿದ್ದಾರೆ. * 2021 ರ ಏಪ್ರಿಲ್ 1 ರಿಂದ 2022 ಮಾರ್ಚ್ 31ರವರೆಗೆ ದಾನ ಕಾರ್ಯದ ವಿವರವನ್ನು ಆಧಾರವಾಗಿಟ್ಟುಕೊಂಡು ಈ ಪಟ್ಟಿ ತಯಾರಿಸಲಾಗಿದೆ. * ವಿಪ್ರೋ ಕಂಪನಿಯ ಪ್ರೇಮ್ ಜಿ ಯವರು 484 ಕೋಟಿ ದಾನ ಮಾಡಿ ಎರಡನೆಯ ಸ್ಥಾನದಲ್ಲಿದ್ದಾರೆ. * ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು 411 ಕೋಟಿ ದಾನವಾಗಿ ನೀಡಿ ಮೂರನೆಯ ಸ್ಥಾನದಲ್ಲಿದ್ದರೆ. * ರೋಹಿಣಿ ನಿಲೇಕಣಿ ರವರು ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಗೆ ಒಟ್ಟು 120 ಕೋಟಿ ದಾನವಾಗಿ ನೀಡಿದ್ದಾರೆ 2021-2022 ರ ಶಾಲಿನ ಮಹಾದಾನಿ ಮಹಿಳೆಯರ ಪೈಕಿ ಇವರು ಮೊದಲ ಸ್ಥಾನದಲ್ಲಿದ್ದಾರೆ.