Job Description: * ಮೊಬೈಲ್ ಬಳಕೆಗಳಲ್ಲಿ ಅತಿ ಹೆಚ್ಚು ಗೂಗಲ್ ಉಪಯೋಗಿಸುವದರಿಂದ ಗೂಗಲ್ ಮೊದಲ ಸ್ಥಾನ ಹೊಂದಿತ್ತು, ಇದನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ಗೂಗಲ್ ಕಂಪನಿಗೆ ಭಾರತೀಯ ಸ್ಪರ್ಧಾ ಆಯೋಗವು 1,337.76 ಕೋಟಿ ದಂಡ ವಿಧಿಸಿದೆ. * ಮೊಬೈಲ್ ಬಳಕೆದಾರರ ದೂರುಗಳನ್ನು ಆಧರಿಸಿ ಸಿಸಿಐ 2019 ರಲ್ಲಿ ಕಾರ್ಯಾಚರಣೆ ನಡೆಸಿತ್ತು, * ಅನ್ಯಾಯದ ವ್ಯವಹಾರವನ್ನು ನಿಲ್ಲಿಸುವಂತೆ ಇಂಟರ್ನೆಟ್ ದೈತ್ಯ ಸಂಸ್ಥೆಗೆ ನ್ಯಾಯೋಚಿತ ವ್ಯಾಪಾರ ನಿಯಂತ್ರಕವು ನಿರ್ದೇಶಿಸಿದೆ. ನಿರ್ದಿಷ್ಟ ಸಮಯದೊಳಗೆ ತನ್ನ ನಡತೆಯನ್ನು ಸರಿಪಡಿಸಿಕೊಳ್ಳುವಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. *ಮೊಬೈಲ್ ಆ್ಯಪ್ ವಿತರಣೆ ಒಪ್ಪಂದ (ಎಂಎಡಿಎ) ಮತ್ತು ವಿಘಟನೆ ವಿರೋಧಿ ಒಪ್ಪಂದ ( ಎಎಫ್ ಎ) ಸಂಬಂಧಿಸಿದಂತೆ ಅಕ್ರಮ ವ್ಯವಹಾರದ ಆರೋಪ ಕೇಳಿಬಂದಿದೆ. ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಗೂಗಲ್ ಸಂಸ್ಥೆಗೆ 1,337 ಕೋಟಿ ರೂ. ದಂಡ ವಿಧಿಸಿರುವುದಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.