Job Description: * ಅಕ್ಟೋಬರ್‌ 18 ರಿಂದ 21 ರವರೆಗೆ ಇಂಟರ್‌ಪೋಲ್‌ನ 90 ನೇ ಸಾಮಾನ್ಯ ಸಭೆ ಇರುವದರಿಂದ ಸಚಿವರು, ವಿವಿಧ ದೇಶಗಳ ಪೊಲೀಸ್‌ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರೀಯ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ 195 ಇಂಟರ್‌ಪೋಲ್‌ ಸದಸ್ಯ ರಾಷ್ಟ್ರಗಳ ನಿಯೋಗಗಳು ಸಭೆಯಲ್ಲಿ ಭಾಗವಹಿಸುತ್ತಿದ್ದು, ಸಾಮಾನ್ಯ ಸಭೆಯು ಇಂಟರ್‌ಪೋಲ್‌ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ ಮತ್ತು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ.* ಸಾಮಾನ್ಯ ಸಭೆಯು ಕೊನೆಯ ಬಾರಿಗೆ 1997 ರಲ್ಲಿ ನಡೆದಿತ್ತು, ಸುಮಾರು 25 ವರ್ಷಗಳ ಅಂತರದ ನಂತರ ಇಂಟರ್‌ಪೋಲ್‌ ಸಾಮಾನ್ಯ ಸಭೆಯು ಭಾರತದಲ್ಲಿ ನಡೆಯುತ್ತಿದೆ 2022 ರಲ್ಲಿ ನವದೆಹಲಿಯಲ್ಲಿ ಇಂಟರ್‌ಪೋಲ್‌ ಸಾಮಾನ್ಯ ಸಭೆಯನ್ನು ಆಯೋಜಿಸುವ ಭಾರತದ ಪ್ರಸ್ತಾಪವನ್ನು ಸಾಮಾನ್ಯ ಸಭೆಯು ಅಗಾಧ ಬಹುಮತದೊಂದಿಗೆ ಅಂಗೀಕರಿಸಿತು.* ಈ ಕಾರ್ಯಕ್ರಮವು ಭಾರತದ ಕಾನೂನು ಮತ್ತು ಸುವ್ಯವಸ್ಥೆ ಯಲ್ಲಿನ ಅತ್ಯುತ್ತಮ ಕ್ರಮಗಳನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸುವ ಅವಕಾಶವನ್ನು ಒದಗಿಸುತ್ತದೆ.* ಕೇಂದ್ರ ಗೃಹ ಸಚಿವ, ಇಂಟರ್‌ಪೋಲ್‌ ಅಧ್ಯಕ್ಷ ಅಹ್ಮದ್‌ ನಾಸಿರ್‌ ಅಲ್‌ ರೈಸಿ ಮತ್ತು ಸಿಬಿಐ ನಿರ್ದೇಶಕ ಜನರಲ್‌ ಶ್ರೀ ಜುರ್ಗೆನ್‌ ಸ್ಟಾಕ್‌ ಅವರು ಭಾಗವಹಿಸಿದ್ದಾರೆ .