Job Description: * ಮಳವಳ್ಳಿ ತಾಲ್ಲೂಕು ದಾಸನ ದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ಕಟ್ಟಿ ಪ್ರಸಿದ್ಧಿಯಾಗಿದ್ದ ಪ್ರಕೃತಿ ಸಂರಕ್ಷಕ 84 ವರ್ಷದ ಕಲ್ಮನೆ ಕಾಮೇಗೌಡ ಅಕ್ಟೋಬರ್ 17 ರಂದು ಅನಾರೋಗ್ಯದಿಂದ ನಿಧನರಾದರು. * ಕುರಿ ಕಾಯುತ್ತಿದ್ದ ಇವರು ತಮ್ಮಲ್ಲಿದ್ದ ಕುರಿಗಳನ್ನು ಮಾರಿ ಬಂದ ಹಣದಲ್ಲಿ ಬೆಟ್ಟದ ಮೇಲೆ ಕಟ್ಟೆಗಳನ್ನು ಕಟ್ಟುತ್ತಿದ್ದರು ಹಾಗು ಇವರು ಹರಿಸು ಪರಿಸರವಿರುವಂತೆ ಕಟ್ಟೆಗಳ ಮದ್ಯದಲ್ಲಿ ಹಲವಾರು ಸಸ್ಯಗಳನ್ನು ನೇಡುತ್ತಿದ್ದರು,ಹಾಗಾಗಿ ಇವರನ್ನು "ಕಟ್ಟೆ ಕಾಮೇಗೌಡ" ಎಂದು ಕರೆಯಲಾಗುತ್ತಿತ್ತು. * ಇವರ ಪರಿಸರ ಸಂರಕ್ಷಣೆಯನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿಯವರು 2020 ರ "ಮನ್ ಕಿ ಬಾತ್" ಸರಣಿಯಲ್ಲಿ ಇವರ ಸೇವೆಯನ್ನು ಕೊಂಡಾಡಿದ್ದರು. * ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಇನ್ನು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ.