Job Description: * ಉತ್ತರ ಪ್ರದೇಶದ ಎನ್.ಟಿ.ಪಿ.ಸಿಯ ಔರೈಯಾ ಅನಿಲ ವಿದ್ಯುತ್ ಘಟಕದಲ್ಲಿ ಎಂ.ಎಚ್.ಐ 701ಡಿ ಅನಿಲ ಟರ್ಬೈನ್ ಗಳಲ್ಲಿ ನೈಸರ್ಗಿಕ ಅನಿಲದೊಂದಿಗೆ ಬೆರೆತ ಜಲಜನಕ ಸಹ ವಿದ್ಯುತ್ ಎನ್.ಟಿ.ಪಿ.ಸಿ ಲಿಮಿಟೆಡ್, ಜಪಾನ್ ಮತ್ತು ಅದರ ಅಂಗಸಂಸ್ಥೆಯಾದ ಮಿತ್ಸುಬಿಷಿ ಪವರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. * ಔರೈಯಾ ಅನಿಲ ವಿದ್ಯುತ್ ಸ್ಥಾವರ ಒಟ್ಟು 663 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯ ಹೊಂದಿದೆ, ಮಾರ್ಗನಕ್ಷೆಯ ಭಾಗವಾಗಿ ಸಿಒ2 ಹೊರಸೂಸುವಿಕೆ ಪ್ರಮಾಣ ತಗ್ಗಿಸಲು ಅನಿಲ ಟರ್ಬೈನ್ ಗಳಲ್ಲಿ ಜಲಜನಕ ಸಹ ಉತ್ಪಾದನೆ ಪ್ರಮುಖ ಪಾತ್ರ ವಹಿಸಲಿದೆ.* ಭಾರತದ ಅತಿ ದೊಡ್ಡ ವಿದ್ಯುತ್ ಉತ್ಪಾದನೆ ಮಾಡುವ ಎನ್.ಟಿ.ಪಿ.ಸಿ ಇಂಧನ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಮತ್ತು ಕಾಪ್26 ಗುರಿಗಳನ್ನು ಸಾಧಿಸುವ ಬದ್ಧತೆಯನ್ನು ಇದು ಹೊಂದಿದೆ. * ಎನ್.ಟಿ.ಪಿ.ಸಿ ವಿವಿಧ ಹೊಸ ಜಲಜನಕ ಉತ್ಪಾದನಾ ತಂತ್ರಜ್ಞಾನದ ಬಳಕೆ, ಭವಿಷ್ಯದ ಸನ್ನದ್ಧತೆ, ಅಗತ್ಯವಿರುವ ಸಾಮರ್ಥ್ಯದ ಅಭಿವೃದ್ಧಿ ಮತ್ತು ತಾಂತ್ರಿಕ ಪರಿಣತಿಗೆ ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಜಲಜನಕ ಮಿಷನ್ ಮತ್ತು ರಾಷ್ಟ್ರೀಯ ಇಂಗಾಲ ಹೊರಸೂಸುವುದನ್ನು ತಗ್ಗಿಸುವ ಗುರಿಗಳನ್ನು ಸಾಧಿಸಲಿದೆ.