Job Description: * ಅಕ್ಟೋಬರ್ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ದೇಶ ಒಂದು ರಸಗೊಬ್ಬರ ಯೋಜನೆಯಡಿ ಯೂರಿಯಾದ "ಭಾರತ್" ಬ್ರ್ಯಾ೦ಡ್ ಬಿಡುಗಡೆ ಮಾಡಿದರು. * ಒಂದು ದೇಶ ಒಂದು ರಸಗೊಬ್ಬರ ಯೋಜನೆಯಡಿಯಲ್ಲಿ ವಿವಿಧ ಕಂಪನಿಗಳು ಸಬ್ಸಿಡಿ ಇರುವ ರಸಗೊಬ್ಬರವನ್ನು ಯೂರಿಯಾ ಬ್ರ್ಯಾ೦ಡ್ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. * ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳಲ್ಲಿ ಈ ಯೋಜನೆಯು ಕೂಡ ಒಂದಾಗಿದೆ, ಇದು ದೇಶದಾದ್ಯಂತ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ಮಾಡಲಿದೆ. * ರೈತರಿಗೆ ಒಂದೇ ಸ್ಥಳದಲ್ಲಿ ಬೇರೆ ಬೇರೆ ರೀತಿಯ ಸೇವೆಗಳನ್ನು ಒದಗಿಸುವ ಸಲುವಾಗಿ 600 ಪಿಎಂ- ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಉದ್ಘಾಟಿಸಲಾಗಿದೆ, ಹಾಗು ಈ ಕೇಂದ್ರಗಳು ಬೀಜ ಗೊಬ್ಬರ ಕೃಷಿ ಉಪಕರಣಗಳ ಮಾರಾಟದ ಜೊತೆಗೆ ಮಣ್ಣು ಮತ್ತು ಬೀಜಗಳ ಪರೀಕ್ಷೆಯ ಸೇವೆಗಳನ್ನು ಒದಗಿಸಲಿವೆ * ಭಾರತ ದೇಶದಲ್ಲಿ 3.25 ಲಕ್ಷ ಪ್ರತಿಶತದಷ್ಟು ರಸಗೊಬ್ಬರದ ಚಿಲ್ಲರೆ ಮಾರಾಟ ಅಂಗಡಿಗಳನ್ನು ಕಿಸಾನ್ ಕೇಂದ್ರಗಳನ್ನಾಗಿ ಮಾಡಲಾಗಿದೆ.