Job Description: * ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ, ಅದೇ ರೀತಿ 2022 ರ ಪ್ರಸಕ್ತ ಸಾಲಿನ ಒಟ್ಟು 6 ಮಂದಿಗೆ ಈ ಪ್ರಶಸ್ತಿ ದೊರೆಕಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀ ರಾಮುಲು ಅವರು ತಿಳಿಸಿದ್ದಾರೆ. * * ಪ್ರಶಸ್ತಿ ಪಡೆದವರು : - - ಬೆಂಗಳೂರಿನ ಕೆ ಆರ್ ಪುರದ "ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ" ಅನಾಥಾಲಯದ ಸಂಸ್ಥಾಪಕ ಎಲ್ ಮುನಿಸ್ವಾಮಿ ಇವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ. - ಚಿಕ್ಕಬಳ್ಳಾಪುರದ ಎನ್ ನಾಗಪ್ಪ ಇತರೆ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ. - ಧಾರವಾಡದ ನಾಗಪ್ಪ ಎಚ್ ಕೋಣಿ ಇತರೆ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ. - ಕೂಡ್ಲಗಿಯ ಪಿ ಪದ್ಮಾ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ. - ಮೈಸೂರಿನ ಸುಭಾಷ್ ಎಸ್ ಎಚ್, ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ. - ಬಳ್ಳಾರಿಯ ಉಷಾರಾಣಿ ಕಲಾ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ. * ಬಳ್ಳಾರಿಯ ನಿವೃತ್ತಿ ಪ್ರಾದ್ಯಾಪಕ ಡಾ. ಕಡ್ಲಬಾಳ ಪನ್ನಂಗಧರ್ ಇವರ ಅಧ್ಯಕ್ಷತೆಯ ಆಯ್ಕೆಯ ಸಮಿತಿಯ ಪ್ರಶಸ್ತಿ ಪಡೆದವರನ್ನು ಆಯ್ಕೆ ಮಾಡಲಾಗಿದೆ.* ಪ್ರಶಸ್ತಿ ಪಡೆದವರಿಗೆ 5 ಲಕ್ಷ ನಗದು ಮತ್ತು 20 ಗ್ರಾಂ ಚಿನ್ನ ಕೊಡಲಾಗುತ್ತದೆ.