Job Description: 2022 ನೇ ಸಾಲಿನ ವಾಯುಪಡೆ ದಿನಾಚರಣೆಯ ಅಂಗವಾಗಿ ಸಶಸ್ತ್ರ ಶಾಖೆ ರಚನೆ * ವಾಯುಪಡೆಯ 90 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ 8 ಅಕ್ಟೋಬರ್ 2022 ರಂದು ಕೇಂದ್ರ ಸರ್ಕಾರವು ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿಗಳಿಗೆ ಸಶಸ್ತ್ರ ವ್ಯವಸ್ಥೆಯ ಶಾಖೆ ರಚಿಸಲು ಅವಕಾಶ ನೀಡಿದೆ, ಇದರಿಂದ ಅಧಿಕಾರಿಗಳ ತರಬೇತಿಗೆ ಖರ್ಚು ಮಾಡುತ್ತಿರುವ 3400 ಕೋಟಿ ಹಣವನ್ನು ಉಳಿತಾಯ ಮಾಡಿದಂತಾಗುತ್ತದೆ ಎಂದು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿಯವರು ಹೇಳಿದ್ದಾರೆ. *1932 ರಲ್ಲಿ ಇಂಗ್ಲೆಂಡ್ ನ ರಾಯಲ್ ಏರ್ ಫೋರ್ಸ್‌ನ ಬೆಂಬಲಿತ ಪಡೆಯಾಗಿ ಭಾರತೀಯ ವಾಯುಪಡೆಯ ಅಧಿಕೃತ ಸೇರ್ಪಡೆಯನ್ನು ವಾಯುಪಡೆ ದಿನ ಗುರುತಿಸುತ್ತದೆ. ಪ್ರತಿ ವರ್ಷ, ಭಾರತೀಯ ವಾಯುಪಡೆಯ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಿನವನ್ನು ಆಚರಿಸಲಾಗುತ್ತದೆ.* ಸ್ವಾತಂತ್ರದ ನಂತರ ಇದೆ ಮೊದಲಿಗೆ ಹೊಸ ಕಾರ್ಯಾಚರಣೆ ನಡೆಯುತ್ತಿದೆ, ಸಶಸ್ತ್ರ ಶಾಖೆ ರಚನೆಯಿಂದ ಬಹಳಷ್ಟು ವಿಧವಾದ ಕಾರ್ಯಾಚರಣೆ ನಡೆಸಲು ಮತ್ತು ದೃಢವಾದ ಹಾಗು ನಿಯಂತ್ರಿತ ವಿನ್ಯಾಸದಿಂದ ಯಶಸ್ವಿಯಾಗಿ ನಡೆಸಲು ಉತ್ತಮ ಎಂದಿದ್ದಾರೆ.* ಸಶಸ್ತ್ರ ಶಾಖೆಯಿಂದ ಕ್ಷಿಪಣಿಗಳು, ವೈಮಾನಿಕ ಸಾಧನಗಳು, ಬಹು ಸಿಬ್ಬಂದಿ ನಿರ್ವಹಣೆಯ ಸಶಸ್ತ್ರ ಹಾರಾಟಕ್ಕೆ ಅಗತ್ಯವಾದ ತರಬೇತಿಯನ್ನು ನೀಡುತ್ತದೆ. * ಡ್ರೋನ್ ಗಳು, ಆಧುನಿಕ ಶಸ್ತ್ರಾಸ್ತ್ರಗಳು ಐ ಆರ್ ಎಸ್ ಗಳಿಂದ ಯುದ್ಧಕ್ಕೆ ಉಪಯೋಗವಾಗುತ್ತದೆ ಎಂದಿದ್ದಾರೆ.* ಮುಂದಿನ ವರ್ಷದಿಂದ ವಾಯುಪಡೆಗೆ ಮಹಿಳಾ ಅಗ್ನಿವೀರರನ್ನು ನೇಮಿಸಲಾಗುತ್ತದೆ ಈ ನಿಟ್ಟಿನಲ್ಲಿ ಮೂಲಸೌಕರ್ಯಗಳ ಸೃಷ್ಟಿ ಪ್ರಗತಿಯಲ್ಲಿದ್ದು ವ್ಯಾಪಾರ ರಚನೆಯನ್ನು ಸುಗಮಗೊಳಿಸಲಾಗುತ್ತಿದೆ ಎಂದು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿಯವರು ಹೇಳಿದ್ದಾರೆ.* ಯುದ್ಧಗಳನ್ನು ಸಮರ್ಥವಾಗಿ ಎದುರಿಸಲು ಭೂ, ವಾಯು, ನೌಕಾದಳಗಳ ಸೇವೆಯನ್ನು ಸೈಬರ್ ಸ್ಪೇಸ್ ಗಳ ವರೆಗೆ ವಿಸ್ತಾರ ಮಾಡಲಾಗಿದೆ.* ಸಶಸ್ತ್ರ ವ್ಯಸ್ಥೆಯೊಂದಿಗೆ ಇನ್ನು ಆಧುನಿಕ ವ್ಯವಸ್ಥೆಯನ್ನು ಹೆಚ್ಚಿಸಬೇಕು.