Job Description: * ಎಚ್ ಡಿ ಎಫ್ ಸಿ ಬ್ಯಾಂಕ್ ಸಣ್ಣ ಮತ್ತು ಮಾಧ್ಯಮ ವರ್ಗದ ವ್ಯಾಪಾರಸ್ಥರಿಗಾಗಿಯೇ "ಸ್ಮಾರ್ಟ್ ಹಬ್ ವ್ಯಾಪಾರ" ಯಾಪ್ ಬಿಡುಗಡೆ ಮಾಡಿದೆ. ವ್ಯಾಪಾರದ ದಿನೇ ನಿತ್ಯದ ವ್ಯವಹಾರ ವಹಿವಾಟುಗಳನ್ನು ಈ ಯಾಪ್ ಮೂಲಕ ಮಾಡಬಹುದಾಗಿದೆ.* ಈ ಯಾಪ್ ನ ಬಿಡುಗಡೆಗೊಳಿಸಿದವರು - ಬ್ಯಾಂಕ್ ನ ಹಿರಿಯ ಉಪಾಧ್ಯಕ್ಷ ಎನ್. ಪ್ರೇಮಾನಂದ ಮತ್ತು ಗಣೇಶ್ ದೇವರಾಜನ್ ರವರು ಯಾಪ್ ಬಿಡುಗಡೆಗೊಳಿಸಿದರು. * ಈ ಮೇಲ್ ಅಥವಾ ಮೊಬೈಲ್ ಮೂಲಕ ವ್ಯಾಪಾರಿಗಳು ಪಾವತಿ ಲಿಂಕ್ ನ್ನು ಕಳುಹಿಸಿ ಹಣ ಪಡೆಯಬಹುದು. ಕಾರ್ಡ್, ಯು ಪಿ ಐ, ಕ್ಯೂ ಆರ್ ಕೋಡ್ ಸೇರಿದಂತೆ ಎಲ್ಲ ರೀತಿಯ ಪಾವತಿ ವ್ಯವಸ್ಥೆಗೆ ಇದು ಬೆಂಬಲಿಸುತ್ತದೆ. ಎಂದು ಹೇಳಲಾಗುತ್ತದೆ. ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂದು ಧ್ವನಿ ಆಧಾರಿತ ಸೂಚನೆಯಿಂದ ತಿಳಿಯಬವುದಾಗಿದೆ. * ಈ ರೀತಿ ವ್ಯಾಪಾರ ವಹಿವಾಟು ಮಾಡುವದರಿಂದ ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ, ಹಾಗೂ ಬ್ಯಾಂಕ್ ನಲ್ಲಿರುವ ಎಲ್ಲ ರೀತಿಯ ಸೇವೆಯನ್ನು ಪಡೆಯಬಹುದು.