Job Description: * 'ಭಾರತದ ವಿಂಡ್ ಮ್ಯಾನ್' ಎಂದೇ ಹೆಸರಾಗಿದ್ದ ಸುಜಲಾನ್ ಎನರ್ಜಿ ಸಂಸ್ಥಾಪಕ ಅಧ್ಯಕ್ಷ ತುಳಸಿ ಆರ್ ತಂತಿ ಅಕ್ಟೋಬರ್ 1 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. * ಭಾರತ ಅಷ್ಟೇ ಅಲ್ಲದೆ, ವಿಶ್ವದಲ್ಲೇ ಪವನ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸುಜಲಾನ್ ಎನರ್ಜಿ ಸ್ಥಾಪಕ ತುಳಸಿ ತಂತಿ ಯವರು 1995 ರಲ್ಲಿ ಕೇವಲ ವಿದೇಶದಲ್ಲಿ ಹೆಸರುವಾಸಿಯಾಗಿದ್ದ ಪವನ ವಿದ್ಯುತ್ ಭಾರತದಲ್ಲಿಯೂ ಕೂಡ ಮುಂಚೂಣಿಯಲ್ಲಿ ತರುವಲ್ಲಿ ಕೆಲಸ ಮಾಡಿದರು. * ದೇಶದ ಅತಿ ದೊಡ್ಡ ಪವನ ವಿದ್ಯುತ್ ಉತ್ಪಾದಕ ಕಂಪನಿಯಾದ ಸುಜಲಾನ್ಈಗ 19.4 ಗಿಗಾವ್ಯಾಟ್ (ಜಿಡಬ್ಲೂ) ವಿದ್ಯುತ್ ಉತ್ಪಾದಿಸುತ್ತದೆ. ಭಾರತದಲ್ಲಿ ಇದು ಶೇ.33 ರಷ್ಟು ಹೊಂದಿದೆ. ಅಮೆರಿಕದಲ್ಲೂ 2 ಗಿಗಾವ್ಯಾಟ್ ಸಾಮರ್ಥ್ಯದ ಘಟಕವನ್ನು ಹೊಂದಿದೆ. * ತುಳಸಿ ತಂತಿಯವರು ಪವನ ವಿದ್ಯುತ್ ಅಲ್ಲದೆ, ಜವಳಿ ಉದ್ಯಮ ತೊಡಗಿಸಿಕೊಂಡಿದ್ದರು.2001 ರಲ್ಲಿ ಅದನ್ನು ಮಾರಾಟ ಮಾಡಿದರು.