Job Description: * ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುವ ಅಧಿಕಾರವನ್ನು ಹೊಂದಿದ್ದಾರೆ.164 ನೇ ವಿಧಿ ರಾಜ್ಯಪಾಲರು ಸಾಮಾನ್ಯವಾಗಿ ವಿಧಾನಸಭೆಯಲ್ಲಿ ಬಹುಮತ ಪಡೆದ ಪಕ್ಷದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುತ್ತಾರೆ.* ಯಾವುದೇ ಪಕ್ಷವು ಬಹುಮತ ಪಡೆಯುವಲ್ಲಿ ವಿಫಲವಾದಾಗ ರಾಜ್ಯಪಾಲರು ತಮ್ಮ "ವಿವೇಚನಾಧಿಕಾರ" ಉಪಯೋಗಿಸಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ.* ಯಾವುದೇ ಪಕ್ಷವು ಬಹುಮತ ಪಡೆಯದಿದ್ದಲ್ಲಿ, ಯಾವ ಪಕ್ಷವು ವಿಧಾನಸಭೆಯಲ್ಲಿ ಹೆಚ್ಚು ಬಹುಮತವನ್ನು ಸಾಬೀತುಪಡಿಸುತ್ತದೆಯೋ ಆ ಪಕ್ಷದ ನಾಯಕನನ್ನು ರಾಜ್ಯಪಾಲರುಮುಖ್ಯಮಂತ್ರಿಯಾಗಿ ನೇಮಕ ಮಾಡುತ್ತಾರೆ.* ಜಮ್ಮು ಮತ್ತು ಕಶ್ಮೀರ, ಕರ್ನಾಟಕ, ಮಹಾರಾಷ್ಟ್ರ ಗಳಲ್ಲಿ ಈ ರೀತಿಯಾಗಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿರುವದನ್ನುನೋಡಬಹುದು. *164 ನೇ ವಿಧಿ ಪ್ರಕಾರ ರಾಜ್ಯಪಾಲರು ಮುಖ್ಯಮಂತ್ರಿಯ ಸಲಹೆ ಮೇರೆಗೆ ಇತರೆ ಮಂತ್ರಿಗಳನ್ನು ನೇಮಕ ಮಾಡುತ್ತಾರೆ. ಅದೇ ರೀತಿ 164(1) ರ ಪ್ರಕಾರ ರಾಜ್ಯಪಾಲರು ಮಂತ್ರಿಗಳನ್ನು ವಜಾ ಮಾಡುವ ಅಧಿಕಾರವನ್ನು ಹೊಂದಿದ್ದಾರೆ. * ರಾಜ್ಯಪಾಲರು ರಾಜ್ಯಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಚಿವ ಸಂಪುಟದ ಮೇರೆಗೆ ನೇಮಿಸುತ್ತಾರೆ. * ರಾಜ್ಯಪಾಲರು ಮಹಿಳಾ ಆಯೋಗ,ರಾಜ್ಯ ಅಲ್ಪಸಸಂಖ್ಯಾತರ ಆಯೋಗ, ರಾಜ್ಯ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ, ಮತ್ತು ಹಿಂದುಳಿದ ವರ್ಗಗಳ ಆಯೋಗಗಳ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸಚಿವ ಸಂಪುಟದ ಸಲಹೆಯ ಮೇರೆಗೆ ನೇಮಿಸುತ್ತಾರೆ.