Job Description: * ಜೋಧಪುರ ದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ವಿ ಆರ್ ಚೌಧರಿ ಅವರ ಸಮ್ಮುಖದಲ್ಲಿ 15 ಲಘು ಯುದ್ಧ ಹೆಲಿಕ್ಯಾಪ್ಟರ್ ಗಳನ್ನು ಭಾರತೀಯ ವಾಯುಪಡೆಯು 3 ಅಕ್ಟೋಬರ್ 2022 ರಂದು ಅಧಿಕೃತವಾಗಿ ಭಾರತದ ಸೇನೆಗೆ ಸೇರಿಸಲಾಯಿತು.* ಭಾರತೀಯ ವಾಯುಪಡೆಗೆ 10 ಹಾಗೂ ಸೇನೆಗೆ 5 ಲಘು ಹೆಲಿಕ್ಯಾಪ್ಟರ್ ಗಳನ್ನು ಸೇರ್ಪಡೆ ಮಾಡಲಾಗಿದೆ.* ಇನ್ನು ಮುಂದಿನ ದಿನಗಳಲ್ಲಿ 95 ಎಚ್ ಸಿಎಲ್ ಗಳನ್ನು ಸೇನೆಗೆ ಸೇರ್ಪಡೆ ಮಾಡುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಈ ಲಘು ಯುದ್ಧ ಹೆಲಿಕ್ಯಾಪ್ಟರ್ ಗಳನ್ನು ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಸಿಎಲ್) ವು ಸಂಪೂರ್ಣ ಸ್ವದೇಶೀ ತಂತ್ರಜ್ಞಾನ ಅಳವಡಿಸಿಕೊಂಡು ತಯಾರಿಸಲಾಗಿದೆ. ಇವು ಅತಿ ಎತ್ತರದ ಸಿಯಾಚಿನ್ ನಂತಹ ನೀರ್ಗಲ್ಲು ಪ್ರದೇಶ,ಮರುಭೂಮಿ ಪ್ರದೇಶದಲ್ಲಿಯೂ ಕಾರ್ಯಯೋಜನೆ ಮಾಡುವಂತೆ ಇದನ್ನು ನಿರ್ಮಿಸಲಾಗಿದೆ. * ಈ ಹೆಲಿಕ್ಯಾಪ್ಟರ್ ಗಳು 5.8 ಟನ್ ತೂಕ ಇದ್ದು, ವಿಶೇಷವಾಗಿ 2 ಎಂಜಿನ್ ಗಳನ್ನುಹೊಂದಿವೆ. ಕ್ಷಿಪಣಿ ಹಾಗೂ ಶಸ್ತ್ರಗಳನ್ನು ಹಾರಿಸುವ ಪರೀಕ್ಷಯಲ್ಲಿ ಸಂಪೂರ್ಣವಾಗಿ ಯಶಸ್ವಿಗೊಂಡಿವೆ. ಈ ಹೆಲಿಕ್ಯಾಪ್ಟರ್ 20 ಎಂಎಂ ಟರೆಂಟ ಗನ್ ಮತ್ತು 70 ಎಂಎಂ ಕ್ಷಿಪಣಿಗಳನ್ನು ಸಿಡಿಸುತ್ತದೆ.