Job Description: * ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಹೆಗ್ಗೋಡಿನ ರಂಗಕರ್ಮಿ ಅಕ್ಷರ ಕೆ.ವಿ. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುತ್ತೂರಿನ ಪರ್ಲಡ್ಕದ ಡಾ.ಶಿವರಾಮ ಕಾರಂತ, ಪ್ರಜಾವ ಬಾಲವನ ಮತ್ತು ಪುತ್ತೂರು ಉಪ ಕಚೇರಿ ವತಿಯಿಂದ ಪ್ರತಿ ವರ್ಷ ನೀಡುವ ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.* ಅಕ್ಷರ ಕೆ.ವಿ. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಸಂಜೀವ ಮಠಂದೂರು, ಸಮಿತಿಯ ಪದನಿಮಿತ್ತ ಶಾಸಕ ಕಾರ್ಯದರ್ಶಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್‌ ಎಂ ಅವರು ತಿಳಿಸಿದ್ದಾರೆ. * ಈ ಪ್ರಶಸ್ತಿಯನ್ನು ಅ.10 ರಂದು ಪುತ್ತೂರಿನಲ್ಲಿ ನಡೆಯುವ ಡಾ.ಕಾರಂತರ ಅವರ 121 ನೇ ಜನ್ಮದಿನೋತ್ಸವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.* ಈ ಪ್ರಶಸ್ತಿಯು 25,000 ನಗದು ಒಳಗೊಂಡಿದೆ.