Job Description: * ಮಂಗಳ ಗ್ರಹದಲ್ಲಿ ಸಂಶೋಧನೆ ನಡೆಸಿ ಅಲ್ಲಿರುವ ಅಪರೂಪದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಭೂಮಿಗೆ ರವಾನಿಸುತ್ತಿದ್ದ ಮಂಗಳಯಾನ ಎಂಬ ಹೆಸರಿನ ಉಪಗ್ರಹವು ಇಂಧನ ಮತ್ತು ಬ್ಯಾಟರಿ ಬಂದಾಗಿರುವದರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಮೂಲಗಳು ತಿಳಿಸಿವೆ.* ಮಂಗಳಯಾನದ ಕಕ್ಷಾಗಾಮಿಯು ಮಂಗಳ ಗ್ರಹದಲ್ಲಿ 6 ತಿಂಗಳವರೆಗೆ ಕಾರ್ಯ ನಿರ್ವಹಿಸಲು ಅಭಿವೃದ್ಧಿ ಪಡಿಸಲಾಗಿತ್ತು ಆದರೆ ಈ ಉಪಗ್ರಹವು ತನ್ನ ಪರಿಭ್ರಮಣ ಪ್ರಾರಂಭಿಸಿ 8 ವರ್ಷಗಳಾಗಿದ್ದು ಇದು ಇಷ್ಟೊಂದು ಅವಧಿಯಲ್ಲಿ ಸಮರ್ಥವಾಗಿ ಕಾಯ್ರನಿರ್ವಸಿದೆ ಹಾಗೂ ಉತ್ತಮ ವೈಜ್ಞಾನಿಕ ಫಲಿತಾಂಶವನ್ನು ಒದಗಿಸಿದೆ. * ಮಂಗಳಯಾನ ಯೋಜನೆಯು 2013 ನವೆಂಬರ್ 5 ರಂದು 450 ಕೋಟಿ ರೂಪಾಯಿಯ ಯೋಜನೆ ಕಾರ್ಯರೂಪಕ್ಕೆ ಬಂದಿತ್ತು.* " ಪಿಎಸ್ಎಲ್ ವಿಸಿ 25 " ರಾಕೆಟ್ ಮೂಲಕ 2014 ಸೆ. 24 ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷಾಗಾಮಿಯನ್ನು ಯಶಸ್ವಿಯಾಗಿ ಸೇರಿಸಲಾಗಿತ್ತು.