Job Description: * ಭಾರತೀಯ ಪುರಾತತ್ವ ಇಲಾಖೆಯು (ಎಎಸ್ಐ) ಮಧ್ಯಪ್ರದೇಶದ ಬಂಧಾವ್ ಗರ್ ನಲ್ಲಿ 20 ಗುಹೆ ಪತ್ತೆಹಚ್ಚಲಾಗಿದೆ. ಈ ಗುಹೆಗಳು ಕ್ರಿ,ಪೂ 2 ಶತಮಾನದಿಂದ ಕ್ರಿ,ಪೂ 5 ಶತಮಾನಕ್ಕೆ ಸೇರಿದ್ದು, ಬಘೇಲ್ ಕಂಡ್ ಪ್ರದೇಶದಲ್ಲಿ ಕಂಡುಬಂದಿವೆ.* ಜಬಲ್ ಪುರ್ ವಲಯದ ಪುರಾತತ್ವ ಇಲಾಖೆಯ ವರಿಷ್ಠಾಧಿಕಾರಿ ಡಾ. ಶಿವಕಾಂತ್ ಬಾಜಪಾಯ್ ಅವರ ನಿರ್ದೇಶನದೊಂದಿಗೆ ಉತ್ಖನನ ಮಾಡಲಾಗಿದ್ದು, ಈ ಸಂಶೋಧನೆಗಳೆಲ್ಲವೂ ಮಹಾರಾಜಾ ಪೋತಸಿರಿ, ಮಹಾರಾಜಾ ಭೀಮಸೇನ, ಹಾಗೂ ಮಹಾರಾಜ ಭಟ್ಟದೇವ ಅವರ ಆಳ್ವಿಕೆಯ ಕಾಲದ್ದಾಗಿದೆ ಎಂದು ಹೇಳಲಾಗಿದೆ. * ಸಂಶೋದನೆಯಲ್ಲಿ ಬೃಹದಾಕಾರದ ಬಾಗಿಲುಗಳು, ಸ್ತೂಪಗಳು, ಹಿಂದೆಂದೂ ಕಾಣದ 46 ಹೊಸ ಶಿಲ್ಪಪತ್ತೆಯಾಗಿದೆ. * ಬೌದ್ಧ ಸ್ತಂಭದ ತುಣುಕುಗಳು (2 ಅಥವಾ 3 ನೇ ಶತಮಾನಕ್ಕೆ ಸೇರಿದಂತೆ), 24 ಬ್ರಾಹ್ಮೀ ಶಾಸನಗಳು, 24 ಪುರಾತನ ದೇವಾಲಯಗಳು, ಕಳಚುರಿ ಕಾಲದ ಅವಶೇಷಗಳು, 19 ಜಲಮೂಲಗಳ ಪುರಾವೆಗಳು ಕಂಡುಬಂದಿವೆ.