Job Description: * ಹುಬ್ಬಳಿಯ ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಿದೇಶಿವಾಗಿ ಪಿಸ್ತೂಲ್ ಹಾಗೂ ರೈಫಲ್ ಮಾದರಿಯನ್ನು ಸಿದ್ಧಪಡಿಸಿದೆ. * ಇದರ ಘಟಕವನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ನವೆಂಬರ್ ನಲ್ಲಿ ಉದ್ಘಾಟಿಸಲಾಗುತ್ತದೆ ಎಂದು ಸಂಸ್ಥೆಯ ಸಿಇಓ ಅಂಕುಶ ಕೊರವಿ ತಿಳಿಸಿದ್ದಾರೆ. * ಆಯುಧಗಳನ್ನು ತಯಾರಿಸುವಲ್ಲಿ ಖಾಸಗಿ ವಲಯದ ಮೊದಲ ಸ್ವದೇಶೀ ಕಂಪನಿ ಈ ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದೆ.* ಅನುಭವವುಳ್ಳ ಮಿಲಿಟರಿ ಮತ್ತು ದಕ್ಷ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಿಂದ ಈ ಆಯುಧಗಳನ್ನು ತಯಾರಿಸಲಾಗುತ್ತದೆ.* ಪಿಸ್ತೂಲ್ ಹಾಗೂ ರೈಫಲ್ ಗಳ ಕಾರ್ಯಕ್ಷಮತೆಯನ್ನು ಗುರುತಿಸಿದ ರಕ್ಷಣಾ ಇಲಾಖೆಯು ಗುಜರಾತ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ರಕ್ಷಣಾ ಆಯುಧಗಳ "ಡೆಫ್ ಎಕ್ಸ್ ಪೋ 2022"ದ ಇಂಡಿಯಾ ಪೆವಿಲಿನ್ ನಲ್ಲಿ ಇದನ್ನು ಪ್ರದರ್ಶಿಸಲು ಅವಕಾಶ ಒದಗಿದೆ.