Job Description: * ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಅಜಾದ ಅವರು ಹೊಸ ರಾಜಕೀಯ ಪಕ್ಷ ಡೆಮಾಕ್ರೆಟಿಕ್ ಅಜಾದ್ ಪಾರ್ಟಿ ಎಂಬ ಹೆಸರಿನ ಹೊಸ ಪಕ್ಷ ಆರಂಭಿಸುವುದಾಗಿ ತಿಳಿಸಿದರು.* ಕಾಂಗ್ರೆಸ್ ಪಕ್ಷದಿಂದ ಹೊರಬಂದ ನಂತರ ಗುಲಾಂ ನಬಿ ಅಜಾದ್ ರವರು ಸೆಪ್ಟೆಂಬರ್ 26 ರಂದು ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ "ಡೆಮಾಕ್ರೆಟಿಕ್ ಅಜಾದ್ ಪಾರ್ಟಿ"(ಡಿಎಪಿ) ಎಂಬ ಹೊಸ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದರು.* ಡಿಎಪಿ ಪಕ್ಷದಲ್ಲಿ ಹಳದಿ ಬಿಳಿ ನೀಲಿ ಬಣ್ಣಗಳನ್ನೊಳಗೊಂಡ ಧ್ವಜವನ್ನು ಸಹ ಅನಾವರಣಗೊಳಿಸಿದರು.ಹಳದಿ ಬಣ್ಣವು ಸೃಜನಶೀಲತೆ ಮತ್ತು ವಿವಿಧತೆಯಲ್ಲಿ ಏಕತೆ ಸೂಚಿಸುತ್ತದೆ. ಮತ್ತು ಬಿಳಿ ಬಣ್ಣವು ಶಾಂತಿ ಮತ್ತು ಭ್ರಾತುತ್ವಸೂಚಿಸುತ್ತದೆ. ಕಡು ನೀಲಿ ಬಣ್ಣವು ಸ್ವಂತಂತ್ರ್ಯವನ್ನು,ಮುಕ್ತ ವಿಮೋಚನಾ ಶಕ್ತಿ ಹಗೂ ಸಹಿಷ್ಣುತೆಯ ಕಲ್ಪನೆಯನ್ನು ಸೂಚಿಸುತ್ತವೆ ಎಂದು ತಿಳಿಸಿದ್ದಾರೆ.