Job Description: * ಐಸಿಸಿಯ ಎಲೈಟ್ ಪ್ಯಾನೆಲ್‌ನ ಭಾಗವಾಗಿದ್ದ ಪಾಕಿಸ್ತಾನದ ಅಂಪೈರ್ ಅಸದ್ ರೌಫ್ (66) ಹಠಾತ್ ಹೃದಯಾಘಾತದಿಂದ ಬುಧವಾರ ಲಾಹೋರ್‌ನಲ್ಲಿ ನಿಧನರಾಗಿದ್ದಾರೆ.* ಅಸದ್ ರೌಫ್ 2006 ರಿಂದ 2013 ರವರೆಗೆ ಐಸಿಸಿಯ ಎಲೈಟ್ ಅಂಪೈರ್ ಪ್ಯಾನೆಲ್‌ನ ಸದಸ್ಯರಾಗಿದ್ದರು. * ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಟ್ಟು 231 ಪಂದ್ಯಗಳಲ್ಲಿ ಅಸದ್ ರೌಫ್ ಅಂಪೈರಿಂಗ್ ಮಾಡಿದ್ದಾರೆ. ಇದರಲ್ಲಿ 64 ಟೆಸ್ಟ್, 28 ಟಿ20 ಮತ್ತು 139 ಏಕದಿನ ಪಂದ್ಯಗಳು ಸೇರಿವೆ.* ರೌಫ್ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು. 71 ಪ್ರಥಮ ದರ್ಜೆ ಮತ್ತು 40 ಲಿಸ್ಟ್ ಎ ಪಂದ್ಯಗಳನ್ನಾಡಿದ್ದರು. ಈ ವೇಳೆ 3 ಶತಕ ಹಾಗೂ 26 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು. ಈ ಮೂಲಕ ಪ್ರಥಮ ದರ್ಜೆಯಲ್ಲಿ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದರು.