Job Description: * ಇತ್ತೀಚಿಗೆ ಸ್ವಿಡನ್ ಪ್ರಧಾನಿಯಾದ ಸೋಶಿಯಲ್ ಡೆಮೋಕ್ರಾಟ್‌ ಮ್ಯಾಗ್ಡಲೀನಾ ಆ್ಯಂಡರ್ಸನ್ ಅಧಿಕಾರ ವಹಿಸಿಕೊಂಡ ದಿನವೇ ರಾಜೀನಾಮೆ ನೀಡಿದ್ದಾರೆ.* ಪ್ರಧಾನಿ ಆ್ಯಂಡರ್ಸನ್ ಅವರು ಸ್ವೀಡನ್ ಸದನದ ಸ್ಪೀಕರ್ ಆ್ಯಂಡ್ರಿಯಾಸ್ ನಾರ್ ಲೇನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.* ಹೊಸ ಸರ್ಕಾರದ ರಚನೆಯಾಗುವವರೆಗೂ ಆ್ಯಂಡರ್ಸನ್ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.* ಆ್ಯಂಡರ್ಸನ್‌ ಎಡ ಮತ್ತು ಕೇಂದ್ರ ಪಕ್ಷಗಳಿಂದ ಬೆಂಬಲಿತವಾದ ಅಲ್ಪಸಂಖ್ಯಾತ 2-ಪಕ್ಷಗಳ ಒಕ್ಕೂಟದ ಮುಖ್ಯಸ್ಥರಾಗಿ ಸ್ಟೀಫನ್ ಲೋಫ್ವೆನ್‌ರಿಂದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಆದರೆ ಸೆಂಟರ್‌ ಪಾರ್ಟಿ ಹೊಸ ಸರ್ಕಾರದ ಹಣಕಾಸು ಮಸೂದೆಯನ್ನು ಬೆಂಬಲಿಸಲು ನಿರಾಕರಿಸಿದಾಗ ಆ ಮೈತ್ರಿ ಕುಸಿಯಿತು.