Job Description: * ಆಂಧ್ರಪ್ರದೇಶದ ಹೈಕೋರ್ಟ್ ಕಳೆದ ಮಾರ್ಚ್ 3 ರಂದು ರಾಜ್ಯ ಸರ್ಕಾರವು ಅಮರಾವತಿ ನಗರವನ್ನು ಮಾತ್ರವೇ ಅಭಿವೃದ್ಧಿಪಡಿಸಬೇಕೆಂದು ತೀರ್ಪುನೀಡಿತ್ತು, ಇದೀಗ ಆಂಧ್ರ ಸರಕಾರವು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಯನ್ನು ಸಲ್ಲಿಸಿರುತ್ತದೆ. * ಆಂಧ್ರಪ್ರದೇಶ ಸರ್ಕಾರವು ವಿಶಾಖಪಟ್ಟಣ ನಗರವನ್ನು ಆಡಳಿತಾತ್ಮಕ ರಾಜಧಾನಿ, ಕರ್ನೂಲ್ ನಗರವನ್ನು ನ್ಯಾಯಾಂಗದ ರಾಜಧಾನಿ ಮತ್ತು ಅಮರಾವತಿಯನ್ನು ಶಾಸಕಾಂಗದ ರಾಜಧಾನಿಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ಹೊಂದಿತ್ತು ಆದರೆ ಹೈಕೋರ್ಟ್ ಇದನ್ನು ತಿರಸ್ಕರಿಸಿ ಅಮರಾವತಿ ನಗರವನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕೆಂದು ತೀರ್ಪು ನೀಡಿತ್ತು.