Job Description: * ಟೆನಿಸ್ ದಿಗ್ಗಜ ಆಟಗಾರ ರೋಜರ್ ಫೆಡರರ್ ಅವರು ಇತ್ತೀಚಿಗೆ ತಮ್ಮ ವೃತ್ತಿಪರ ಟೆನಿಸ್ ಗೆ ವಿದಾಯ ಹೇಳಿದರು. * ಫೆಡರರ್ ಅವರು ಕಳೆದ 24 ವರ್ಷಗಳಲ್ಲಿ ಒಟ್ಟು 1500 ಪಂದ್ಯಗಳನ್ನು ಆಡಿದ್ದಾರೆ, ಮತ್ತು ಮುಂದಿನ ವಾರ ಲಂಡನ್ ನಲ್ಲಿ ನಡೆಯಲಿರುವ ಲೆವರ್ ಕಪ್ ಟೂರ್ನಿಯು ಫೆಡರರ್ ಅವರಿಗೆ ಕಟ್ಟಕಡೆಯ ಎಟಿಪಿ ಸ್ಪರ್ಧೆಯಾಗಲಿದೆ. * * ಫೆಡರರ್ ಅವರ ಜೀವನ ಸಾಧನೆ : - * ರೋಜರ್ ಫೆಡರರ್ ಅವರು ಆಗಸ್ಟ್ 8,1981 ರಂದು ಸ್ವಿಡ್ಜರ್ ಲ್ಯಾಂಡ್ ನ ಬಾಸೆಲ್ ನಲ್ಲಿ ಹುಟ್ಟಿದರು, ಮತ್ತು 1998ರಲ್ಲಿ ತಮ್ಮ ವೃತ್ತಿಪರ ಟೆನಿಸ್ ಆಟಕ್ಕೆ ಕಾಲಿಟ್ಟರು. * ಟೆನಿಸ್ ಆಟದಲ್ಲಿ ಒಟ್ಟು 103 ಪ್ರಶಸ್ತಿ ಗಳಿಸಿರುವ ಇವರು ಇದುವರೆಗೆ ಒಟ್ಟು 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಪಡೆದಿದ್ದಾರೆ ಹಾಗೂ ಡೇವಿಸ್ ಕಪ್ ಪ್ರಶಸ್ತಿ, ಹಾಪ್ ಮನ್ ಕಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.