Job Description: * ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. * ಆರನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಕಳೆದ ವರ್ಷ ಯುಎಇ ಆತಿಥ್ಯದಲ್ಲಿ ನಡೆದಿದ್ದ 2021 ರ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ. * 145 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಆರನ್ ಫಿಂಚ್ 5,401 ರನ್‌ಗಳನ್ನು ಪಡೆದಿದ್ದರೆ. ಇದರಲ್ಲಿ 17 ಶತಕಗಳೂ ಇವೆ. ಅಲ್ಲದೇ 2020 ರಲ್ಲಿ ಆಸ್ಟ್ರೇಲಿಯಾ ಪುರುಷರ ಏಕದಿನ ಕ್ರಿಕೆಟ್ ವಿಭಾಗದ `ಪ್ಲೇಯರ್ ಆಫ್ ದಿ ಯಿಯರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ 2015 ರ ವಿಶ್ವಕಪ್ ಗೆಲ್ಲಲ್ಲು ಪ್ರಮುಖ ಪಾತ್ರ ವಹಿಸಿದ್ದಾರೆ. * ನ್ಯೂಜಿಲ್ಯಾಂಡ್ ಎದುರು ನಡೆಯುವ ಪಂದ್ಯವೇ ಅವರ ಏಕ ದಿನ ಕ್ರಿಕೆಟ್ ನ ಕೊನೆಯ ಪಂದ್ಯವಾಗಿದೆ.