Job Description: * ಏಷ್ಯಾಕಪ್ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿ 2022 ನೇ ಆವೃತ್ತಿಯು ದುಬೈನಲ್ಲಿ ನಡೆಯುತ್ತಿದ್ದು, * ಈ ಟೂರ್ನಿಯಿಂದ ಭಾರತವು ಹೊರಗುಳಿದಿದ್ದು ಒಟ್ಟು 4 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಸೋಲನುಭವಿಸಿದೆ. * ಇತ್ತೀಚೆಗೆ ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತವು ಭರ್ಜರಿ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಮೊದಲನೇ ಟಿ-ಟ್ವೆಂಟಿ ಶತಕವನ್ನು ದಾಖಲಿಸಿದರು, * ಈ ಮೂಲಕ ವಿರಾಟ್ ಕೊಹ್ಲಿ ಅವರು ಒಟ್ಟು 71 ಶತಕಗಳನ್ನು ಗಳಿಸಿದಂತಾಯಿತು. * ಈ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸೋಲನುಭವಿಸಿದ ಭಾರತವು ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡು ಟೂರ್ನಿಯಿಂದ ಹೊರಗುಳಿದಿದೆ. * ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯಲ್ಲಿ ಬಹುತೇಕ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶಿಸಲಿವೆ.