Job Description: * ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು 2 ದಿನಗಳ ಜಪಾನ್ ಪ್ರವಾಸ ಕೈಗೊಂಡಿದ್ದು ಈ ವೇಳೆ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ 2 + 2 ಸಚಿವರ ಸಭೆಯಲ್ಲಿ ಭಾಗವಹಿಸಿದರು.* ಈ ವೇಳೆ ಭಾರತ ಹಾಗೂ ಜಪಾನ್ ರಾಷ್ಟ್ರಗಳು ರಕ್ಷಣಾ ಸಹಕಾರ, ಜಂಟಿ ಸೇನಾ ತಾಲೀಮಿಗೆ ಸಂಬಂಧಿಸಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಂಡವು.* ಚೀನಾದ ಆಕ್ರಮಣಕಾರಿ ನಡೆಯ ವಿರುದ್ಧ ಉಭಯ ರಾಷ್ಟ್ರಗಳು ಇಂಡೋ ಪೆಸಿಫಿಕ್ ಒಳಗೊಂಡಂತೆ ಮುಕ್ತ, ತೆರೆದ ಹಾಗೂ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಗಾಗಿ ತಮ್ಮ ಸಂಬಂಧವನ್ನು ಗಟ್ಟಿ ಗಳಿಸಿಕೊಂಡವು.* ಈ ಒಪ್ಪಂದದ ವೇಳೆ ಜಪಾನ್ ರಕ್ಷಣಾ ಸಚಿವ ಯಸುಕಜು ಹಮಡ ಅವರು ಕೂಡ ಪಾಲ್ಗೊಂಡಿದ್ದರು.