Job Description: * ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಸುರೇಶ್ ರೈನಾ ಇನ್ನು ಮುಂದೆ ಐಪಿಎಲ್ ಮತ್ತು ಉತ್ತರ ಪ್ರದೇಶಕ್ಕಾಗಿ ದೇಶೀಯ ಕ್ರಿಕೆಟ್‌ನಲ್ಲಿಯೂ ಆಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ* ಸುರೇಶ್ ರೈನಾ ಬಿಸಿಸಿಐ (BCCI), ಯುಪಿ ಕ್ರಿಕೆಟ್, ಸಿಎಸ್ಕೆ, ರಾಜೀವ್ ಶುಕ್ಲಾ ಹಾಗೂ ನನಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ, ಸ್ನೇಹಿತರಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ,” ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.* 200 ಪಂದ್ಯಗಳಲ್ಲಿ 5 ಸಾವಿರದ 528 ರನ್ ಗಳಿಸಿದ್ದಾರೆ.* ವಿದೇಶಿ ಲೀಗ್ನಲ್ಲಿ ಆಡುವ ಸಲುವಾಗಿಯೇ ರೈನಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.* ಭಾರತೀಯ ಕ್ರಿಕೆಟ್ ಮಂಡಳಿಯ ನಿಯಮಗಳ ಪ್ರಕಾರ, ಒಬ್ಬ ಆಟಗಾರ ಬಿಸಿಸಿಐ ಆಯೋಜಿಸುವ ಲೀಗ್ಗಳಲ್ಲಿ ಅಥವಾ ದೇಶೀ ಕ್ರಿಕೆಟ್ನಲ್ಲಿ ಆಡುತ್ತಿದ್ದರೆ ಆತ ಮತ್ತೊಂದು ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ.