Job Description: * ಇತ್ತೀಚೆಗೆ ಪೋಲಾರ್ ಸ್ಯಾಟೆಲೈಟ್ ಲಾಂಚ್ ವೆಹಿಕಲ್ (PSLV) ರಾಕೆಟ್‌ಗಳನ್ನು ನಿರ್ಮಿಸುವ ಬೃಹತ್ ಗುತ್ತಿಗೆಯನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ (HAL) ಮತ್ತು ಲಾರ್ಸನ್ ಆ್ಯಂಡ್ ಟೂಬೊ (L&T ) ಕೈಗಾರಿಕಾ ಕಂಪನಿಗಳು ಪಡೆದುಕೊಂಡಿವೆ.* ನ್ಯೂ ಸ್ಪೇಸ್ ಇಂಡಿಯಾ ಸಂಸ್ಥೆಯಿಂದ (NSIL) ಈ ಡೀಲ್‌ನ ಮೊತ್ತ 860 ಕೋಟಿ ರೂಪಾಯಿಯಾಗಿದೆ. * ಇದು PSLVಗಳ ಎಂಡ್ ಟು ಎಂಡ್ ಉತ್ಪಾದನಾ ಕ್ಷೇತ್ರಕ್ಕೆ ಈ ಉದ್ಯಮದ ಮೊದಲ ಪ್ರವೇಶ ಆಗಲಿದೆ. * ಈ ಒಪ್ಪಂದದನ್ವಯ, ಭಾರತದ ಉಪಗ್ರಹ ಉಡಾವಣಾ ವಾಹನದ ಪ್ರಧಾನ ಶಕ್ತಿಯಾದ 5 PSLV ರಾಕೆಟ್‌ಗಳನ್ನು ನಿರ್ಮಿಸಲಾಗುತ್ತದೆ.* ರಾಕೆಟ್ ನಿರ್ಮಾಣ ವಿಚಾರದಲ್ಲಿ ಉದ್ಯಮದೊಂದಿಗೆ ಸೇವಾ ಮಟ್ಟದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎನ್‌ಎಸ್‌ಐಎಲ್‌ ತಿಳಿಸಿದೆ.* NSIL, ಬಾಹ್ಯಾಕಾಶ ಇಲಾಖೆಯಡಿ ಕಾರ್ಯ ನಿರ್ವಹಿಸುವ ಕೇಂದ್ರ ಸರ್ಕಾರಿ ಉದ್ಯಮವಾಗಿದ್ದು ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ಸಂಸ್ಥೆಯಾಗಿದೆ.