Job Description: * ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಮಗೆ ಘೋಷಿಸಲಾಗಿದ್ದ ಪ್ರತಿಷ್ಠಿತ ರಾಮನ್ ಮ್ಯಾಗ್ನೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. * ಶೈಲಜಾ ಅವರು ಕೇರಳದ ಆರೋಗ್ಯ ಮಂತ್ರಿಯಾಗಿದ್ದ ವೇಳೆ ನಿಫಾ, ಕೋವಿಡ್ -19 ಮಹಾಮಾರಿಯನ್ನು ಎದುರಿಸಿದ್ದ ರೀತಿ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದ್ದು ಅದಕ್ಕಾಗಿ 64 ನೇ ಮ್ಯಾಗ್ನೆಸೆ ಪ್ರಶಸ್ತಿಗಾಗಿ ಶೈಲಜಾ ಹೆಸರನ್ನು ಪರಿಗಣಿಸಲಾಗಿತ್ತು.* ಏಷ್ಯಾದ ನೊಬೆಲ್ ಎಂದೇ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಗುರುತಿಸಲಾಗಿದೆ. “ಈ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಪಕ್ಷ ಸೂಚಿಸಿದ್ದು, ಆ ನಂತರದಲ್ಲಿ ಈ ನಿರ್ಧಾರ ಮಾಡಲಾಗಿದೆ” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕಿ ಶೈಲಜಾ ಹೇಳಿದ್ದಾರೆ.* 1957ರಲ್ಲಿ ಸ್ಥಾಪಿತವಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಏಷ್ಯಾದ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ. * ಇದನ್ನು ಮೂರನೇ ಫಿಲಿಪೈನ್ ಅಧ್ಯಕ್ಷರ ಸ್ಮರಣೆರ ಭಾಗವಾಗಿ ನೀಡಲಾಗುತ್ತಿದೆ. * ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಏಷ್ಯಾದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.