Job Description: * ರಷ್ಯಾದ ಮಾಜಿ ಅಧ್ಯಕ್ಷ, ಸೋವಿಯತ್ ಒಕ್ಕೂಟದ (USSR) ಕೊನೆಯ ನಾಯಕ ಮಿಖಾಯಿಲ್ ಗೊರ್ಬಚೆವ್(91) ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 91 ವರ್ಷ ವಯಸ್ಸಾಗಿತ್ತು.* ಶೀತಲ ಸಮರವನ್ನು ರಕ್ತಪಾತವಿಲ್ಲದೆ ಕೊನೆಗೊಳಿಸಿದ ಗೋರ್ಬಚೇವ್ ಸೋವಿಯತ್ ಒಕ್ಕೂಟದ ಪತನವನ್ನು ತಡೆಯುವಲ್ಲಿ ವಿಫಲರಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇತ್ತೀಚೆಗೆ ನಿಧನರಾದರು.* ರಷ್ಯಾ ಸೋವಿಯತ್ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿದ್ದ ಗೊರ್ಬಚೆವ್, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಶಸ್ತ್ರಾಸ್ತ್ರ ಕಡಿತದ ಒಪ್ಪಂದ ಮಾಡಿಕೊಂಡಿದ್ದರು.* ಮಿಖಾಯಿಲ್ ಗೊರ್ಬಚೆವ್ 7 ವರ್ಷಗಳಿಗಿಂತ ಕಡಿಮೆ ಅವಧಿಗೆ ಅಧಿಕಾರದಲ್ಲಿದ್ದರು.* ಗೋರ್ಬಚೇವ್ ಮಾರ್ಚ್ 1985 ರಲ್ಲಿ ಸೋವಿಯತ್ ನಾಯಕರಾದರು ಮತ್ತು ಡಿಸೆಂಬರ್ 25, 1991 ರಂದು ರಾಜೀನಾಮೆ ನೀಡಿದರು. ಅವರು ಸೋವಿಯತ್ ವಿಭಜನೆಯನ್ನು ಒಳಗೊಂಡಂತೆ ಅನೇಕ ಬದಲಾವಣೆಗಳನ್ನು ಮಾಡಿದರು.* ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ‘ನಾನು ದೇಶಕ್ಕೆ, ಯುರೋಪ್ ಮತ್ತು ಜಗತ್ತಿಗೆ ಅಗತ್ಯವಾದ ಸುಧಾರಣೆಗಳನ್ನು ಪ್ರಾರಂಭಿಸಿದ ವ್ಯಕ್ತಿ’ ಎಂದುಹೇಳಿಕೊಂಡಿದ್ದರು.* ಶೀತಲ ಸಮರವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೊನೆಯ ಸೋವಿಯತ್ ನಾಯಕ 1990 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದರು.* ಇದಲ್ಲದೆ ಗೋರ್ಬಚೇವ್ ಅವರಿಗೆ ಪ್ರಪಂಚದ ಮೂಲೆ ಮೂಲೆಗಳಿಂದ ಪ್ರಶಸ್ತಿ- ಪುರಸ್ಕಾರಗಳು ದೊರೆತಿವೆ. ಆದರೂ 1991 ರ ಸೋವಿಯತ್ ಒಕ್ಕೂಟದ ಪತನದ ಕಾರಣದಿಂದ ರಷ್ಯನ್ನರು ಅವರನ್ನು ದೂಷಿಸಿದ್ದರು. * 1996 ರಲ್ಲಿ ಗೋರ್ಬಚೇವ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.1 ಕ್ಕಿಂತ ಕಡಿಮೆ ಮತಗಳನ್ನು ಪಡೆದುಕೊಂಡಿದ್ದರು.