Job Description: * ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದ್ದು, ಕಳೆದ ವರ್ಷ ಶೇ 7.2 ಏರಿಕೆ ಕಂಡಿದೆ.* 2021 ರಲ್ಲಿ ದೇಶದಾದ್ಯಂತ 1,64,033 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. * 2020 ರಲ್ಲಿ 1,53,052 ಪ್ರಕರಣಗಳು ದಾಖಲಾಗಿದ್ದವು. ಅತಿ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ( 22,207 ) ಮೊದಲ ಸ್ಥಾನದಲ್ಲಿದೆ. ನಂತರದ ನಾಲ್ಕು ಸ್ಥಾನಗಳಲ್ಲಿ ತಮಿಳುನಾಡು ( 18,925 ), ಮಧ್ಯಪ್ರದೇಶ (14,965 ), ಪಶ್ಚಿಮ ಬಂಗಾಳ ( 13,500 ) ಮತ್ತು ಕರ್ನಾಟಕ ( 13,056 ) ರಾಜ್ಯಗಳಿವೆ. * ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ, ( ಶೇ . 3.6 ) ಕೊನೆ ಸ್ಥಾನದಲ್ಲಿದೆ.* ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ( 2,840 ), ಪುದುಚೇರಿ ( 504 ) ಮೊದಲೆರಡು ಸ್ಥಾನಗಳಲ್ಲಿವೆ. * ವೃತ್ತಿ ಸಂಬಂಧಿತ, ಪ್ರತ್ಯೇಕತೆ, ಕಿರುಕುಳ, ಹಿಂಸೆ, ಕೌಟುಂಬಿಕ ಸಮಸ್ಯೆ, ಮಾನಸಿಕ ಅಸ್ವಸ್ಥತೆ, ಮದ್ಯ ವ್ಯಸನ, ಆರ್ಥಿಕ ನಷ್ಟದಂತಹ ಸಮಸ್ಯೆಗಳು ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಹೇಳಿದೆ.