Job Description: * ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ ಡಿಒ) ಮುಖ್ಯಸ್ಥರಾಗಿ ಖ್ಯಾತ ವಿಜ್ಞಾನಿ ಸಮೀರ್ ಕಾಮತ್ ನೇಮಕ. * ಕಾಮತ್ ಅವರು ಈ ಮೊದಲು ಡಿಆರ್‌ಡಿಒದ ನೌಕಾ ವ್ಯವಸ್ಥೆ ಮತ್ತು ಸರಕು ವಿಭಾಗದ ಮಹಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.* ಕಾಮತ್ ಅವರು ಡಿಆರ್‌ಡಿಒ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ 60 ವರ್ಷ ವಯಸ್ಸಾಗುವವರೆಗೂ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.* ಸಂಪುಟ ಸಮಿತಿಯು ಸತೀಶ್ ರೆಡ್ಡಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸುವ ನಿರ್ಣಯ ತೆಗೆದುಕೊಂಡಿದೆ.* ಸತೀಶ್ ರೆಡ್ಡಿ ಅವರನ್ನು 2018 ರ ಆಗಸ್ಟ್‌ನಿಂದ 2020 ರ ಆಗಸ್ಟ್‌ವರೆಗೂ ಡಿಆರ್‌ಡಿಒ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು . ಬಳಿಕ ಅವರ ಸೇವಾವಧಿಯನ್ನು ಮತ್ತೆರಡು ವರ್ಷ ವಿಸ್ತರಿಸಲಾಗಿತ್ತು.