Job Description: * ಮೂಲ ಜಿಲ್ಲೆಗಳಿಂದ ಬೇರ್ಪಟ್ಟು 1997 ರ ಆಗಸ್ಟ್ 24 ರಂದು ಏಕಕಾಲಕ್ಕೆ ಏಳು ಹೊಸ ಜಿಲ್ಲೆಗಳು ಉದಯಿಸಿ, 2022 ರ ಆಗಸ್ಟ್ 24 ಕ್ಕೆ 25 ವಸಂತಗಳು ಪೂರೈಸಿವೆ. ಇದಾದ ನಂತರವೂ ಯಾದಗಿರಿ, ಇತ್ತೀಚೆಗೆ ವಿಜಯನಗರ ಜಿಲ್ಲೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 31 ಕ್ಕೇರಿದೆ.* * ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಜಿಲ್ಲೆಗಳು : -* 1997 ರ ಮೇ ತಿಂಗಳಿನಲ್ಲಿ ಅಂದಿನ ಸಿಎಂ ಜೆ.ಎಚ್.ಪಟೇಲ್ ಏಳು ಹೊಸ ಜಿಲ್ಲೆಗಳನ್ನು ಘೋಷಿಸಿದರು. * 1997 ರ ಆಗಸ್ಟ್ 15 ಕ್ಕೆ ದಾವಣಗೆರೆ, ಬಾಗಲಕೋಟೆ ಹಾಗೂ ಉಡುಪಿ ಜಿಲ್ಲೆಗಳು ಉದ್ಘಾಟನೆಗೊಂಡವು.* ನಂತರದ 9 ದಿನಗಳ ಬಳಿಕ ಆಗಸ್ಟ್ 24 ಕ್ಕೆ ಕೊಪ್ಪಳ, ಗದಗ ಮತ್ತು ಹಾವೇರಿ ಜಿಲ್ಲೆಗಳು ಉದ್ಘಾಟನೆಗೊಂಡವು. * ಮತ್ತೆ ಒಂದೆರಡು ದಿನಗಳ ಅಂತರದಲ್ಲಿ ಚಾಮರಾಜನಗರ ಜಿಲ್ಲೆಯಾಗಿ ಕರ್ನಾಟಕದ ಭೂಪಟದಲ್ಲಿ ಗುರುತಿಸಿಕೊಂಡಿತು.* ಭೌಗೋಳಿಕ ಹಿನ್ನೆಲೆ, ಜನಸoಖ್ಯೆ, ಮೂಲ ಜಿಲ್ಲೆಗಳಿಗಿರುವ ಅ೦ತರದ ಆಧಾರದಲ್ಲಿ ಈ ಏಳು ಜಿಲ್ಲೆಗಳು ಹುಟ್ಟಿಕೊಂಡವು.* ಬಾಗಲಕೋಟೆ ಜಿಲ್ಲೆಯು ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕವಾಯಿತು. ರಾಯಚೂರ ಜಿಲ್ಲೆಯನ್ನು ವಿಭಜಿಸಿ ಕೊಪ್ಪಳ ಜಿಲ್ಲೆಯನ್ನು ರಚಿಸಲಾಯಿತು ಹಾಗೂ ಧಾರವಾಡ ಜಿಲ್ಲೆಯಿಂದ ಗದಗ ಮತ್ತು ಹಾವೇರಿ ಜಿಲ್ಲೆಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದಉಡುಪಿಯನ್ನು ರಚಿಸಲಾಯಿತು.