Job Description: * ಗ್ರಾ ಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿಯಾಗಿ ಮೊದಲ ಬಾರಿ ಎತ್ತಿನ ಗಾಡಿ , ಕಬಡ್ಡಿ , ಖೋ ಖೋ ಕ್ರೀಡೆಗಳನ್ನು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೆ ಆಯೋಜಿಸಲಿವೆ.* ವಯೋಮಿತಿ ಇಲ್ಲದ ಮುಕ್ತ ಕ್ರೀಡಾಕೂಟ ಇದಾಗಿದ್ದು, ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಎಲ್ಲ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿದೆ.* ಈ ಕ್ರೀಡಾಕೂಟಕ್ಕೆ ತಾಂತ್ರಿಕ ನೆರವನ್ನು ಕ್ರೀಡಾ ಇಲಾಖೆ ನೀಡಲಿದೆ.* ಉದ್ಯೋಗ ಖಾತ್ರಿ ಅಭಿವೃದ್ಧಿಪಡಿಸಲಾದ ಮೈದಾನಗಳಲ್ಲಿಯೂ ಕ್ರೀಡಾಕೂಟಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. * ತಾಲ್ಲೂಕು ಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ 200 ಮತ್ತು ಜಿಲ್ಲಾಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ 250 ನೀಡಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. * ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ತಲಾ 300 ನ್ನು ಉಪಾಹಾರ, ಭೋಜನಕ್ಕೆ ನೀಡುವಂತೆ ಸೂಚಿಸಲಾಗಿದೆ