Job Description: * ಓಡಿಶಾದಲ್ಲಿ ಕಡಿಮೆ ವ್ಯಾಪ್ತಿಯ ಮೇಲ್ಮೈ ವಾಯು ದಾಳಿಯ ಸ್ವದೇಶಿ ತಂತ್ರಜ್ಞಾನದ ಕ್ಷಿಪಣಿಯ (VL - SRSAM) ಪರೀಕ್ಷೆಯನ್ನು ಓಡಿಶಾದ ಕರಾವಳಿಯ ಚಂಡೀಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ITR) ಯಶಸ್ವಿಯಾಗಿ ನಡೆಯಿತು.* ವಿಎಲ್ - ಎಸ್‌ಆರ್‌ಎಸ್‌ಎಎಂ ( ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಕ್ಷಿಪಣಿ ) ಈ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( DRDO ) ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ನಡೆಸಿದವು. * ವರ್ಟಿಕಲ್ ಲಾಂಚ್ ಸಾಮರ್ಥ್ಯದ ಪ್ರದರ್ಶನಕ್ಕಾಗಿ ಹೆಚ್ಚಿನ ವೇಗದ ಮಾನವರಹಿತ ವೈಮಾನಿಕ ಗುರಿಯ ಮೇಲೆ ಭಾರತೀಯ ನೌಕಾದಳದ ನೌಕೆಯಿಂದ ಹಾರಾಟ ಪರೀಕ್ಷೆಯನ್ನು ನಡೆಸಲಾಯಿತು. ಸ್ವದೇಶಿ ರೇಡಿಯೊ ಫ್ರೀಕ್ವೆನ್ಸಿ (RF) ಸೀಕರ್ ಹೊಂದಿರುವ ಕ್ಷಿಪಣಿಗಳು ಹೆಚ್ಚಿನ ನಿಖರತೆಯೊಂದಿಗೆ ಗುರಿಯನ್ನು ತಲುಪಿದವು.* VL-SRSAM ವ್ಯವಸ್ಥೆಯನ್ನು DRDO ನಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.* ಪರೀಕ್ಷಾರ್ಥ ಉಡಾವಣೆ ವೇಳೆ ಐಟಿಆರ್, ಚಂಡೀಪುರದಿಂದ ನಿಯೋಜಿಸಲಾದ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಮತ್ತು ಟೆಲಿಮೆಟ್ರಿ ಸಿಸ್ಟಮ್‌ಗಳಂತಹ ವಿವಿಧ ಶ್ರೇಣಿಯ ಉಪಕರಣಗಳಿಂದ ಸೆರೆಹಿಡಿಯಲಾದ ಫ್ಲೈಟ್ ಡೇಟಾವನ್ನು ಬಳಸಿಕೊಂಡು ಹಾರಾಟದ ಮಾರ್ಗ ಮತ್ತು ವಾಹನದ ಕಾರ್ಯಕ್ಷಮತೆಯ ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡಲಾಯಿತು.